ಸಿದ್ದಾಪುರ, ಮೇ 5: ಕೊರೊನಾ ವೈರಸ್ ಹರಡದಂತೆ ಹಾಗೂ ಎಚ್ಚರ ವಹಿಸುವಂತೆ ಜಾಗೃತಿ ಮೂಡಿಸುತ್ತಿರುವ ವಿಶೇಷಚೇತನ ಯುವಕನ ಕಾರ್ಯ ಜನಮೆಚ್ಚುಗೆ ಪಡೆದಿದೆ.

ಸಿದ್ದಾಪುರದ ಕರಡಿಗೋಡು ನಿವಾಸಿಯಾಗಿರುವ ವಿಶೇಷಚೇತನ ಮಂಜುನಾಥ್ ಎಂಬ ಯುವಕ ತನ್ನ ಸೈಕಲಿನಲ್ಲಿ ಸಿದ್ದಾಪುರ ಪಟ್ಟಣ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ಸೈಕಲಿನ ಹಿಂಬದಿಗೆ ಸಣ್ಣದೊಂದು ಸೌಂಡ್ ಬಾಕ್ಸ್ ಅನ್ನು ಅಳವಡಿಸಿ ಮೊಬೈಲ್ ಮೂಲಕ ಕೊರೊನಾಗೆ ಸಂಬಂಧಿಸಿದ ಹಾಡುಗಳು ಧ್ವನಿಸುರುಳಿ ಜಾಗೃತಿ ಮೂಡಿಸುವ ಎಚ್ಚರವಹಿಸುವ ಸಂದೇಶಗಳನ್ನು ಹಾಕುತ್ತಾ ಸುತ್ತಾಡುತ್ತಾ ಅರಿವು ಮೂಡಿಸುತ್ತಿರುವುದು ವಿಶೇಷವಾಗಿದೆ.

ಈತ ವಿಶೇಷಚೇತನವಾದರೂ ಈ ಹಿಂದೆ ಕಸವನ್ನು ಪಟ್ಟಣದಲ್ಲಿ ಹಾಕದಂತೆ ಹಾಗೂ ಸ್ವಚ್ಛತೆ ಕಾಪಾಡುವಂತೆ ತನ್ನ ಸೈಕಲಿನಲ್ಲಿ ಪ್ರಚಾರ ಮಾಡುತ್ತಿದ್ದನು ಧನು ಇದೀಗ ಕೊರೊನಾ ವೈರಸ್ ಬಗ್ಗೆ ಜಾಗೃತಿ ಮೂಡಿಸುತ್ತಿರುವುದು ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರನಾಗಿದ್ದಾನೆ. ನವೆಂಬರ್ ತಿಂಗಳಿನಲ್ಲಿ ಮಂಜುನಾಥ ಸೈಕಲಿಗೆ ದೊಡ್ಡಗಾತ್ರದ ಕನ್ನಡ ಧ್ವಜವನ್ನು ಕಟ್ಟಿ ಕನ್ನಡದ ಬಗ್ಗೆ ಹಾಡುಗಳನ್ನು ಮೊಬೈಲ್ ಮೂಲಕ ಹಾಕುತ್ತಾ ಕನ್ನಡದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದರು ಇದಲ್ಲದೆ ದಿನನಿತ್ಯ ತನ್ನ ಸೈಕಲಿನಲ್ಲಿ ಲಾಕ್ಡೌನ್ ಹಿನ್ನೆಲೆಯಲ್ಲಿ ಮನೆಮನೆಗಳಿಗೆ ಹಾಲು ತೆಗೆದುಕೊಂಡು ಹೋಗಿ ಮಾರಾಟ ಮಾಡುತ್ತಿದ್ದಾನೆ. ಈತ ಪಾಲಿಬೆಟ್ಟದ ಚೆಸಾರ್ಯ್ ಹೋಮ್‍ನಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ.

- ವಾಸು