ಮಡಿಕೇರಿ, ಮೇ 5: ಲಾಕ್‍ಡೌನ್ ಜಾರಿಯಲ್ಲಿದ್ದರೂ ಜನರ ಅನುಕೂಲತೆಗಾಗಿ ನಿಯಮಗಳನ್ನು ಒಂದಿಷ್ಟು ಸಡಿಲಿಕೆ ಮಾಡಲಾಗುತ್ತಿದೆ. ಕೊಡಗು ಹಸಿರು ವಲಯದಲ್ಲಿರುವು ದರಿಂದ ಬಹುತೇಕ ಅಂಗಡಿ-ಮಳಿಗೆಗಳನ್ನು ತೆರೆಯಲು ವ್ಯಾಪಾರ-ವಹಿವಾಟಿಗೆ ಅವಕಾಶ ಕಲ್ಪಿಸಲಾಗಿದೆ. ಆರಂಭದ ದಿನಗಳಲ್ಲಿ ವಾರದಲ್ಲಿ ಎರಡು ದಿನಗಳ ಕಾಲ 5 ರಿಂದ 7 ಗಂಟೆಗಳ ಸಡಿಲಿಕೆ ಮಾಡಲಾಗುತ್ತಿತ್ತು. ನಿನ್ನೆಯಿಂದ 10 ಗಂಟೆಗಳ ಕಾಲಾವಕಾಶ ನೀಡಲಾಗಿದ್ದು, ಮದ್ಯ ದಂಗಡಿಗಳು ಕೂಡ ತೆರೆಯಲ್ಪಟ್ಟಿವೆ.ಸಡಿಲಿಕೆ ಇಂದಿನಿಂದ ಮುಂದು ವರಿದಿದ್ದು, ವಾರದ ಎಲ್ಲ ದಿನಗಳು ಬೆಳಿಗ್ಗೆ 7 ರಿಂದ ಸಂಜೆ 5 ರ ವರೆಗೆ ಅನುಮತಿ ವಿಧಿಸಿರುವ ಅಂಗಡಿ ಗಳನ್ನು ತೆರೆಯಲು ಅವಕಾಶ ನೀಡಲಾಗಿದೆ.ನಿನ್ನೆಯವರೆಗೂ ನಿಯಮ ಸಡಿಲಿಕೆ ಅವಧಿಯಲ್ಲಿ ಜನರು ಖರೀದಿಗಾಗಿ ಮುಗಿಬೀಳುತ್ತಿದ್ದುದು ಸಾಮಾನ್ಯವಾಗಿತ್ತು. ಆದರೆ ಇಂದೂ ಕೂಡ ಅವಕಾಶವಿದ್ದರೂ ಜನರ ಸಂಖ್ಯೆ ಕಡಿಮೆಯಿತ್ತು. ಅಂಗಡಿ ಗಳೆಲ್ಲವೂ ತೆರೆದಿದ್ದರೂ ಗ್ರಾಹಕರಿ ರಲಿಲ್ಲ. ಮದ್ಯದಂಗಡಿಗಳಲ್ಲಿ ನಿನ್ನೆ ಜೇನು ನೊಣಗಳ ಹಾಗೆ ಜನ ಮುತ್ತಿಕೊಂಡಿದ್ದರಾದರೂ ಇಂದು ಕೊಳ್ಳುವವರೇ ಕಾಣುತ್ತಿರಲಿಲ್ಲ. ಮಾಂಸದ ಅಂಗಡಿಗಳು ಬೆಳಿಗ್ಗೆ ತೆರೆದಿದ್ದವಾದರೂ ಮಧ್ಯಾಹ್ನದ ವೇಳೆಗೆ ಮುಚ್ಚಲ್ಪಟ್ಟವು.
ಜಿಲ್ಲಾಡಳಿತದ ಆದೇಶ ರಾತ್ರಿ ವೇಳೆ ಜಾರಿಯಾಗುತ್ತಿರುವುದರಿಂದ ಮಾಂಸ ವ್ಯಾಪಾರಿಗಳು ಸೇರಿದಂತೆ ಇತರ ವ್ಯಾಪಾರಿಗಳು ದಾಸ್ತಾನು ತರಿಸಿಕೊಳ್ಳದ್ದರಿಂದ ಬೇಗನೇ ಅಂಗಡಿಗಳನ್ನು ಮುಚ್ಚುವಂತಾಯಿತು. ಮಧ್ಯಾಹ್ನ ನಂತರ ಮೋಡದ ವಾತಾವರಣದೊಂದಿಗೆ ಮಂಕು ಕವಿದಂತಿತ್ತು.
ಸಹಜ ಸ್ಥಿತಿಯತ್ತ ಜನಜೀವನ
ಸೋಮವಾರಪೇಟೆ: ಕೊರೊನಾ ಆತಂಕದ ಕಾರ್ಮೋಡದ ನಡುವೆಯೂ ಜನಜೀವನ ನಿಧಾನವಾಗಿ ಸಹಜ ಸ್ಥಿತಿಯತ್ತ ಮರಳುತ್ತಿದೆ. ಲಾಕ್‍ಡೌನ್‍ನಲ್ಲಿ ಹೆಚ್ಚಿನ ಸಡಿಲಿಕೆ ಇರುವದರಿಂದ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ ಜನಜೀವನ ಸುಧಾರಿಸುತ್ತಿದೆ.
ಪಟ್ಟಣದಲ್ಲಿ ಹೊಟೇಲ್, ಲಾಡ್ಜ್, ಹೋಂ ಸ್ಟೇಗಳನ್ನು ಹೊರತುಪಡಿಸಿ ದಂತೆ ಬಹುತೇಕ ಅಂಗಡಿ ಮುಂಗಟ್ಟುಗಳು ತೆರೆಯಲ್ಪಟ್ಟಿದ್ದರಿಂದ ಕಳೆದ ಒಂದೂವರೆ ತಿಂಗಳ ಹಿಂದೆ ಇದ್ದಂತಹ ದೃಶ್ಯಗಳು ಇದೀಗ ಗೋಚರಿಸುತ್ತಿವೆ.
ಸೋಮವಾರಪೇಟೆ ಪಟ್ಟಣದಲ್ಲಿ ಹಲವಷ್ಟು ಅಂಗಡಿಗಳು ತೆರೆದಿದ್ದರೂ ವ್ಯಾಪಾರ ವಹಿವಾಟಿಗೆ ಗ್ರಾಹಕರನ್ನು ಕಾದು ಕೂರುವ ಪರಿಸ್ಥಿತಿ ನಿರ್ಮಾಣವಾಗಿದೆ. ನಿನ್ನೆಯಷ್ಟೇ ಮಾಮೂಲಿಯಂತೆ ಸಂತೆ ನಡೆದಿದ್ದರಿಂದ ಇಂದು ಪಟ್ಟಣದತ್ತ ಆಗಮಿಸುವ ಮಂದಿಯಲ್ಲಿ ಭಾರೀ ಪ್ರಮಾಣದ ಇಳಿಕೆಯಾಗಿದೆ.
ಬೆಳಿಗ್ಗೆ 6 ಗಂಟೆಯಿಂದಲೇ ಅಂಗಡಿಗಳು ತೆರೆದಿದ್ದರೂ ಸಾಧಾರಣದ ವ್ಯಾಪಾರವೂ ಇಲ್ಲದ್ದ ರಿಂದ ಕೆಲವೊಂದು ಅಂಗಡಿಗಳು ಮಧ್ಯಾಹ್ನದ ವೇಳೆಗೆ ಮುಚ್ಚಲ್ಪಟ್ಟರೆ, ಒಂದೆರಡು ಮಾಂಸದ ಅಂಗಡಿಗಳನ್ನು ಹೊರತುಪಡಿಸಿದರೆ ಬಹುತೇಕ ಅಂಗಡಿಗಳು ಬೆಳಗ್ಗಿನಿಂದಲೇ ಮುಚ್ಚಲ್ಪಟ್ಟಿದ್ದವು. ಇನ್ನು ತಾಲೂಕಿನ ಇತರ ಭಾಗದಲ್ಲೂ ಇದೇ ರೀತಿಯ ಪರಿಸ್ಥಿತಿ ಕಂಡುಬಂತು. ಶನಿವಾರಸಂತೆಯಲ್ಲಿ ಬೆಳಿಗ್ಗೆ ಬಹುತೇಕ ಅಂಗಡಿಗಳು ತೆರೆದಿದ್ದರೆ, ಮಧ್ಯಾಹ್ನದ ವೇಳೆಗೆ ವ್ಯಾಪಾರವಿಲ್ಲದೇ ಹಲವಷ್ಟು ಅಂಗಡಿಗಳು ಮುಚ್ಚಿದವು.
ಮಧ್ಯಾಹ್ನ 3 ಗಂಟೆ ಸುಮಾರಿಗೆ ದಟ್ಟಮೋಡದೊಂದಿಗೆ ಮಳೆ ಯಾಗುವ ಸನ್ನಿವೇಶ ನಿರ್ಮಾಣ ವಾದ್ದರಿಂದ ಭಾಗಶಃ ಅಂಗಡಿಗಳು ಮುಚ್ಚಲ್ಪಟ್ಟು, ಸ್ವಯಂಪ್ರೇರಿತ ಲಾಕ್‍ಡೌನ್ ಸನ್ನಿವೇಶ ಕಂಡುಬಂತು.
ಕೊಡ್ಲಿಪೇಟೆ ಭಾಗದಲ್ಲೂ ಜನಸಂಚಾರ ವಿರಳವಾಗಿತ್ತು. ಮಾದಾಪುರದಲ್ಲಿ ಬೆಳಿಗ್ಗೆ ಒಂದಿಷ್ಟು ಚಟುವಟಿಕೆಗಳು ಕಂಡುಬಂದರೂ ಮಧ್ಯಾಹ್ನದ ವೇಳೆಗೆ ಮತ್ತದೇ ನೀರವತೆ ಆವರಿಸಿತು. ಈ ಹಿಂದೆ ನಡೆಯುತ್ತಿದ್ದ ಸಂತೆ ದಿನಗಳಂದು ಹೊರತುಪಡಿಸಿದರೆ ವಾರದ ಇತರ ದಿನಗಳಲ್ಲಿ ಸಾರ್ವಜನಿಕರು ಪಟ್ಟಣದತ್ತ ಆಗಮಿಸಲು ಮನಸ್ಸು ಮಾಡದಿರುವದು ಗೋಚರಿಸಿತು.
ಮಾದಾಪುರದಲ್ಲಿ ಆಟೋ ಚಾಲಕರು ತಮ್ಮ ಆಟೋಗಳನ್ನು ನಿಲ್ದಾಣದಲ್ಲಿ ನಿಲುಗಡೆಗೊಳಿಸಿ ಗ್ರಾಹಕರಿಗಾಗಿ ಕಾಯುತ್ತಿದ್ದರು. ಮಾದಾಪುರ
(ಮೊದಲ ಪುಟದಿಂದ) ಜಂಕ್ಷನ್‍ನಲ್ಲಿರುವ ಕೆಲ ಅಂಗಡಿ, ಬೇಕರಿ, ತರಕಾರಿ ಮಳಿಗೆಯಲ್ಲಿ ಬೆರಳೆಣಿಕೆಯ ಮಂದಿ ಕಂಡುಬಂದರು.
ಬೆಳಿಗ್ಗೆ 6 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವ್ಯಾಪಾರ ವಹಿವಾಟಿಗೆ ಅವಕಾಶ ಕಲ್ಪಿಸಿದ್ದರೂ ಎಲ್ಲಿಯೂ ಗಡಿಬಿಡಿಯ ದೃಶ್ಯ ಕಂಡುಬರಲಿಲ್ಲ. ಸಂಜೆಯವರೆಗೂ ತೆರೆದಿದ್ದ ಬೆರಳೆಣಿಕೆಯ ಅಂಗಡಿಗಳಲ್ಲಿ 4 ರಿಂದ 5 ಗಂಟೆಯ ಸುಮಾರಿಗೆ ಒಂದಿಷ್ಟು ವ್ಯಾಪಾರ ನಡೆಯಿತು. ನಂತರ ಸರ್ಕಾರದ ಲಾಕ್‍ಡೌನ್ ನಿಯಮದಂತೆ ಅಂಗಡಿಗಳು ಮುಚ್ಚಲ್ಪಟ್ಟವು.
ಜನಸಂದಣಿ ಇಲ್ಲದ ಸಿದ್ದಾಪುರ
ಸಿದ್ದಾಪುರ: ಲಾಕ್‍ಡೌನ್ ಸಡಿಲಿಕೆ ಮಾಡಿರುವ ಹಿನ್ನೆಲೆಯಲ್ಲಿ ಮಂಗಳವಾರದಂದು ಸಿದ್ದಾಪುರದಲ್ಲಿ ಯಾವುದೇ ಜನಸಂದಣಿ ಕಂಡುಬರದೆ ಬಿಕೋ ಎನ್ನುತ್ತಿತ್ತು. ಜಿಲ್ಲಾಡಳಿತ ನಾಲ್ಕು ದಿನಗಳ ಸಡಿಲಿಕೆ ನೀಡಿರುವ ಹಿನ್ನೆಲೆಯಲ್ಲಿ ಭಾನುವಾರ ಹಾಗೂ ಸೋಮವಾರದಂದು ಸಿದ್ದಾಪುರ ವ್ಯಾಪ್ತಿಯಲ್ಲಿ ಅಗತ್ಯ ಸಾಮಗ್ರಿಗಳನ್ನು ಖರೀದಿಸಲು ಜನ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಆದರೆ ಮಂಗಳವಾರದಂದು ಸಿದ್ದಾಪುರದಲ್ಲಿ ಎಲ್ಲಾ ಅಂಗಡಿ ಮುಂಗಟ್ಟುಗಳು ತೆರೆದಿದ್ದವು. ಆದರೆ ಹೊಟೇಲುಗಳು ಮುಚ್ಚಿದ್ದವು.
ಸಿದ್ದಾಪುರ, ನೆಲ್ಲ್ಯಹುದಿಕೇರಿ ಭಾಗದಲ್ಲಿ ಆಟೋ ರಿಕ್ಷಾಗಳು ಸಂಚರಿಸುತ್ತಿದ್ದವು. ಅಂಗಡಿ ಮುಂಗಟ್ಟುಗಳು ತೆರೆದಿದ್ದರೂ ಜನ ಇಲ್ಲದೆ ವರ್ತಕರು ಸುಮ್ಮನೆ ಕುಳಿತಿದ್ದುದು ಕಂಡುಬಂದಿತು.
ಗ್ರಾಹಕರಿಲ್ಲದೆ ಅಂಗಡಿಗಳ ಎದುರು ಮೌನ ಆವರಿಸಿದೆ. ಮಾಂಸ ವ್ಯಾಪಾರಿಗಳಿಗೆ ಗ್ರಾಹಕರು ಇಲ್ಲದೆ ಮಾಂಸಗಳು ವ್ಯಾಪಾರ ಆಗದೆ ಮಳಿಗೆಗಳಲ್ಲಿ ಹಾಗೆಯೇ ಉಳಿದಿತ್ತು. ಬಸ್ಸುಗಳ ಸಂಚಾರವಿಲ್ಲದೆ ದೂರದಿಂದ ಬರುವವರ ಸಂಖ್ಯೆ ಇಳಿಮುಖಗೊಂಡಿದೆ.
ಸಿದ್ದಾಪುರ ಸುತ್ತಮುತ್ತಲಿನ ಕಾಫಿ ತೋಟಗಳಲ್ಲಿ ಕೆಲಸ ಮಾಡುತ್ತಿದ್ದ ಹೊರಜಿಲ್ಲೆಯ ಕಾರ್ಮಿಕರು ಅವರ ಊರುಗಳಿಗೆ ತೆರಳುತ್ತಿದ್ದಾರೆ. ವಾಹನಗಳಲ್ಲಿ ದೂರದ ಊರಿಗೆ ಕೆಲಸಕ್ಕೆ ತೆರಳುವ ಕಾರ್ಮಿಕರಿಗೆ ತೆರಳಲು ಸಾಧ್ಯವಾಗುತ್ತಿಲ್ಲ; ಇದರಿಂದಾಗಿ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ವಾಹನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತೆರಳದಂತೆ ನಿರ್ಬಂಧ ವಿಧಿಸಿರುವ ಹಿನ್ನೆಲೆಯಲ್ಲಿ ಕಾರ್ಮಿಕರು ಸ್ಥಳೀಯ ತೋಟಗಳಿಗೆ ಕೆಲಸಕ್ಕೆ ಸೇರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೂ ಕೂಡ ಇದೀಗ ಬಹುತೇಕ ಕೆಲಸಗಳು ಮುಕ್ತಾಯಗೊಂಡಿದ್ದು, ಇದರಿಂದಾಗಿ ಕಾರ್ಮಿಕರಿಗೆ ಸಮಸ್ಯೆಯಾಗಿದೆ.
ಬಿಕೋ ಎನ್ನುತ್ತಿರುವ ನಾಪೆÇೀಕ್ಲು
ನಾಪೆÇೀಕ್ಲು: ಲಾಕ್‍ಡೌನ್ ಸಡಿಲಗೊಳಿಸಿದ ಹಿನ್ನೆಲೆಯಲ್ಲಿ ನಾಪೆÇೀಕ್ಲು ಪಟ್ಟಣ ಜನ ಸಂಚಾರ, ವಾಹನ ಸಂಚಾರವಿಲ್ಲದೆ ಬಿಕೋ ಎನ್ನುತ್ತಿದೆ.
ಆಗೊಮ್ಮೆ, ಈಗೊಮ್ಮೆ ಮಾತ್ರ ಖಾಸಗಿ ವಾಹನಗಳ ಸಂಚಾರ ಕಂಡು ಬರುತ್ತಿದೆ. ಮದ್ಯ ಮಾರಾಟ ಆರಂಭಗೊಂಡ ಮೊದಲ ದಿನ ಮಾತ್ರ ಸಾಲುಗಟ್ಟಿ ನಿಂತ ಮದ್ಯಪ್ರಿಯರು ಇಂದು ಮದ್ಯದ ಅಂಗಡಿಯ ಬಳಿ ಸುಳಿದಂತೆ ಕಂಡು ಬರಲಿಲ್ಲ. ಎರಡು ಮದ್ಯದ ಅಂಗಡಿಗಳು ಗ್ರಾಹಕರಿಲ್ಲದೆ ಬಿಕೋ ಎನ್ನುತ್ತಿತ್ತು. ಉಳಿದಂತೆ ಇತರ ದಿನಸಿ ಅಂಗಡಿಗಳು ಹಾಗೂ ಅಗತ್ಯ ವಸ್ತುಗಳ ಅಂಗಡಿಗಳು ಕೂಡ ಜನರಿಲ್ಲದೆ ಖಾಲಿ ಖಾಲಿಯಾಗಿರು ವದು ಕಂಡು ಬಂತು. ನ್ಯಾಯಬೆಲೆ ಅಂಗಡಿಗಳಲ್ಲೂ ಗ್ರಾಹಕರ ಸಂಖ್ಯೆ ವಿರಳವಾಗಿತ್ತು. ಆಟೋ ರಿಕ್ಷಾಗಳು ರಸ್ತೆಗಿಳಿದರೂ ಬಾಡಿಗೆಯಿಲ್ಲದೆ ಚಾಲಕರು ಪರದಾಡುವ ಪರಿಸ್ಥಿತಿ ಕಂಡು ಬಂತು.
ಮದ್ಯಪ್ರಿಯರಿಲ್ಲ...
ಕುಶಾಲನಗರ: ಲಾಕ್‍ಡೌನ್ ಸಡಿಲಗೊಂಡ ನಡುವೆ ಮದ್ಯದಂಗಡಿಗೆ ಅನುಮತಿ ನೀಡಿದ ಹಿನ್ನಲೆಯಲ್ಲಿ ಸೋಮವಾರ ಎಂಆರ್‍ಪಿ ಔಟ್‍ಲೆಟ್ ಗಳ ಎದುರುಗಡೆ ಮದ್ಯಪ್ರಿಯರ ಸಾಲು ಕಂಡುಬಂದಿದ್ದು ಎರಡನೇ ದಿನ ಮಾತ್ರ ಗ್ರಾಹಕರ ಸಂಖ್ಯೆ ಕ್ಷೀಣಿಸಿತ್ತು.
ಪಟ್ಟಣದ ಎರಡು ಎಂಆರ್‍ಪಿ ಔಟ್‍ಲೆಟ್‍ಗಳಲ್ಲಿ ಇದೇ ಪರಿಸ್ಥಿತಿ ಗೋಚರಿಸಿತು. ಇನ್ನೊಂದೆಡೆ ಸ್ಟಾಕ್ ಕೂಡ ಖಾಲಿಯಾಗಿದ್ದು ಇನ್ನಷ್ಟೇ ಬರಬೇಕಿದೆ ಎಂದು ಸನ್ನದುದಾರರು ಮಾಹಿತಿ ನೀಡಿದ್ದಾರೆ.
ಧಾರ್ಮಿಕ ಕಾರ್ಯಕ್ಕೆ ಮನವಿ
ಭಾಗಮಂಡಲ: ಲಾಕ್‍ಡೌನ್ ಘೋಷಣೆಯಾದಂದಿನಿಂದ ಧಾರ್ಮಿಕ ಕ್ಷೇತ್ರಗಳು ಬಿಕೋ ಎನ್ನುತ್ತಿವೆ. ಭಕ್ತರು ದೇವಾಲಯದತ್ತ ಸುಳಿಯುತ್ತಿಲ್ಲ. ಭಾಗಮಂಡಲದ ಭಗಂಡೇಶ್ವರ ದೇವಾಲಯದಲ್ಲಿ ನಿತ್ಯಪೂಜೆಗಳು ನಡೆಯುತ್ತಿವೆ. ಇತ್ತ ತ್ರಿವೇಣಿ ಸಂಗಮದಲ್ಲಿ ಯಾವುದೇ ಕಾರ್ಯಕ್ರಮಗಳು ನಡೆಯುತ್ತಿಲ್ಲ.
ಕೇಶಮುಂಡನ, ಪಿಂಡ ಪ್ರದಾನದಂತಹ ಕಾರ್ಯಗಳು ಸ್ಥಗಿತಗೊಂಡಿವೆ. ಇದರಿಂದ ಕೊಡಗಿನ ಮಂದಿಗೆ ಸಮಸ್ಯೆಯಾಗಿದೆ. ಇತ್ತೀಚೆಗೆ ಮೃತಪಟ್ಟವರ ಕುಟುಂಬದವರು ವಿವಿಧ ಕಾರ್ಯಗಳಲ್ಲಿ ಭಾಗವಹಿಸಲಾಗುತ್ತಿಲ್ಲ. ತ್ರಿವೇಣಿ ಸಂಗಮದಲ್ಲಿ ಪಿತೃಕಾರ್ಯಗಳನ್ನು ನಡೆಸಲು ಅವಕಾಶ ಕಲ್ಪಿಸಿಕೊಡ ಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಲಾಕ್‍ಡೌನ್ ನಿರ್ಬಂಧಗಳು ಸಡಿಲಗೊಂಡ ಹಿನ್ನೆಲೆಯಲ್ಲಿ ವಿವಾಹ ಸಮಾರಂಭಗಳನ್ನು ಸರಳವಾಗಿ ಆಚರಿಸಲು ಅವಕಾಶ ಕಲ್ಪಿಸಲಾಗಿದೆ. ಆದರೆ ಸ್ವರ್ಗಸ್ಥರಾದ ಹಿರಿಯರ ಕಾರ್ಯಗಳನ್ನು ನೆರವೇರಿಸದೆ ವಿವಾಹ ಸಂಭ್ರಮದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ. ಸಾಮಾಜಿಕ ಅಂತರ ಕಾಯ್ದುಕೊಂಡು ಕಾರ್ಯನೆರ ವೇರಿಸಲು ಅನುಮತಿ ನೀಡಬೇಕು. ದಿನಕ್ಕೆ ನಿರ್ಧಿಷ್ಟ ಜನರಿಗೆ ಪಿಂಡಪ್ರದಾನ ಮಾಡಲು ಅವಕಾಶ ಕಲ್ಪಿಸಬೇಕು. ಕಾರ್ಯನೆರವೇರಿಸಲು ಅಗತ್ಯ ಅರ್ಚಕರನ್ನು ನೇಮಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಸ್ಥಳೀಯರಾದ ಕಾಳನ ರವಿ ಮಾತನಾಡಿ, ಜಿಲ್ಲಾಡಳಿತ ಕಟ್ಟಿಂಗ್ ಶಾಪ್, ಬ್ಯೂಟಿಪಾರ್ಲರ್, ಕೋಲ್ಡ್ ಶಾಪ್‍ಗಳನ್ನು ತೆರೆಯಲು ಷರತ್ತುಬದ್ಧವಾದ ಆದೇಶವನ್ನು ನೀಡಿದೆ. ಭಾಗಮಂಡಲ ತ್ರಿವೇಣಿ ಸಂಗಮದಲ್ಲಿ ಕೊಡಗಿನವರಿಗೆ ಪಿಂಡಪ್ರದಾನ ಮಾಡಲು ಅವಕಾಶ ಕಲ್ಪಿಸಿಕೊಡಬೇಕು. ದೇವಾಲಯದಲ್ಲಿ ಕೆಲಸ ನಿರ್ವಹಿಸುತ್ತಿರುವ ಸೆಕ್ಯೂರಿಟಿಗಳನ್ನೇ ಸಂಗಮದಲ್ಲಿ ನೇಮಿಸಿ ಪಿಂಡಪ್ರದಾನ ಮಾಡುವವರಿಗೆ ಅವಕಾಶವನ್ನು ಕಲ್ಪಿಸಿಕೊಡಬೇಕು. ಅರ್ಚಕರಿಗೆ ಹಾಗೂ ಕ್ಷೌರಿಕರಿಗೆ ಕೆಲಸ ನಿರ್ವಹಿಸಲು ಜಿಲ್ಲಾಡಳಿತ ಅನುವು ಮಾಡಿಕೊಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಸುಂಟಿಕೊಪ್ಪದಲ್ಲಿ ಮದ್ಯವಿಲ್ಲ
ಸುಂಟಿಕೊಪ್ಪ: ಲಾಕ್‍ಡೌನ್ ಸಡಿಲಿಕೆಗೊಳಿಸಲಾಗಿದ್ದು ಮಂಗಳ ವಾರದಂದು ಯಾವುದೇ ಜನಸಂದಣಿ ಕಂಡು ಬರಲಿಲ್ಲ. ಭಾನುವಾರ ಮತ್ತು ಸೋಮವಾರ ದಿನಗಳಂದು ಜನಸಂದಣಿ ಕಂಡು ಬಂದಿತು. ಸೋಮವಾರ ಮದÀ್ಯಪ್ರಿಯರಿಗೆ ಪಾವನವಾದಂತಾದರೂ ಮಂಗಳ ವಾರ ಮಧ್ಯಾಹ್ನದವರೆಗೆ ಮದÀ್ಯವಿಲ್ಲದೆ ಸುಂಟಿಕೊಪ್ಪ ಪಾನಪ್ರಿಯರು ಹತಾಶೆಗೊಳಗಾಗಿದ್ದರು. ಮತ್ತೆ ಕೆಲವರು ಸಮೀಪದ ಕಂಬಿಬಾಣೆ ಯಲ್ಲಿರುವ ಮದ್ಯದಂಗಡಿಗೆ ತೆರಳಿ ಮದ್ಯ ಖರೀದಿಸಿದರು. ಅಪರಾಹ್ನ ನಂತರ ಮದÀ್ಯದಂಗಡಿ ತೆರೆದರೂ ಮದÀ್ಯ ಪ್ರಿಯರಿಲ್ಲ್ಲದೆ ಬಿಕೋ ಎನ್ನುತ್ತಿತ್ತು.
ನಗರದಲ್ಲಿ ಎಲ್ಲಾ ಅಂಗಡಿ ಮುಂಗ್ಗಟ್ಟುಗಳು ತೆರೆದು ದಿನದ ವಹಿವಾಟಿನಲ್ಲಿ ತೊಡಗಿಸಿಕೊಂಡರು. ಆದರೆ ಹೊಟೇಲುಗಳು ಮಾತ್ರ ತೆರೆಯಲಿಲ್ಲ. ಆಟೋ ರಿಕ್ಷಾಗಳು ಪ್ರಯಾಣಿಕರಿಲ್ಲದೆ ನಿಲ್ದಾಣದಲ್ಲಿ ನಿಂತಿದ್ದು ಕಂಡು ಬಂತು. ಮಾಂಸ ವ್ಯಾಪಾರಿಗಳಿಗೆ ಸಹ ಗ್ರಾಹಕರಿಲ್ಲದೆ ಬಿಕೋ ಎನ್ನುತ್ತಿತ್ತು.
ಜನ-ವಾಹನ ಸಂಚಾರ ದಟ್ಟಣೆ ಕಡಿಮೆ
ವೀರಾಜಪೇಟೆ: ಕೊರೊನಾ ವೈರಸ್ ಲಾಕ್‍ಡೌನ್ ನಿರ್ಬಂಧದ ಸಡಿಲಿಕೆಯನ್ನು ಸಂಜೆ 5ಗಂಟೆಯ ತನಕ ವಿಸ್ತರಿಸಿದರೂ ಇಂದು ಬೆಳಗ್ಗಿನಿಂದ ಜನ ವಾಹನ ಸಂಚಾರ ಕಡಿಮೆ ಇತ್ತು. ಗ್ರಾಹಕರುಗಳಿಗೆ ಅಗತ್ಯವಾದ ಎಲ್ಲ ಅಂಗಡಿ ಮುಂಗಟ್ಟು ಗಳು ಎಂದಿನಂತೆ ತೆರೆದಿದ್ದರೂ ಜನ ಸಂಚಾರದ ಸಂಖ್ಯೆ ಕಡಿಮೆ ಇದ್ದುದರಿಂದ ಎಲ್ಲ ಅಂಗಡಿಗಳು ಖಾಲಿ ಖಾಲಿ ಇತ್ತು.
ಖಾಸಗಿ ಬಸ್ಸುಗಳ ಸಂಚಾರ ಇನ್ನು ಆರಂಭವಾಗದ ಹಿನ್ನೆಲೆಯಲ್ಲಿ ವೀರಾಜಪೇಟೆ ಸುತ್ತಮುತ್ತಲಿನ ಜನರು ಪಟ್ಟಣಕ್ಕೆ ಬರಲು ಸಾಧ್ಯವಾಗಿಲ್ಲ. ಹೊಟೇಲ್, ರೆಸ್ಟೋರೆಂಟ್‍ಗಳು ಪಾರ್ಸಲ್ ವ್ಯವಸ್ಥೆಯ ಷರತ್ತಿನಲ್ಲಿರು ವುದರಿಂದ ಇಂದು ಆರಂಭಿಸಿರಲಿಲ್ಲ. ಪಟ್ಟಣದಲ್ಲಿ ಎಲ್ಲ ಮದ್ಯದ ಅಂಗಡಿಗಳು ತೆರೆದಿದ್ದರೂ ಇಂದು ಖರೀದಿದಾರರ ಸಂಖ್ಯೆ ಕಡಿಮೆ ಕಂಡು ಬಂತು. ಆಟೋ, ಟ್ಯಾಕ್ಸಿಗಳ ಸಂಚಾರ ವನ್ನು ಆರಂಭಿಸಲಾಗಿತ್ತು. ಆಟೋ ರಿಕ್ಷಾದಲ್ಲಿ ಒಬ್ಬ ಪ್ರಯಾಣಿಕ ಮಾತ್ರ ಪ್ರಯಾಣಿಸುವಂತೆ ಚಾಲಕರಿಗೆ ಸೂಚನೆ ನೀಡಿದ್ದು ಮಾತ್ರವಲ್ಲದೆ ವಿಶೇಷವಾಗಿ ಆಟೋ ಸಂಚಾರವನ್ನು ಗಮನಿಸಿದ್ದರು.