ವೀರಾಜಪೇಟೆ, ಮೇ 5: ಕೇಂದ್ರ ಸರ್ಕಾರದ 2 ಹಂತದ ಲಾಕ್‍ಡೌನ್‍ನ್ನು ಕಟ್ಟುನಿಟ್ಟಾಗಿ ಪಾಲಿಸಿದ್ದು, ಮೂರನೇ ಹಂತದ ಲಾಕ್‍ಡೌನ್‍ಗೆ ಅದೇ ರೀತಿ ಸಹಕಾರ ನೀಡಬೇಕೆಂದು ವೀರಾಜಪೇಟೆ ಶಾಸಕ ಕೆ.ಜಿ ಬೋಪಯ್ಯ ಹೇಳಿದರು.ತಾಲೂಕು ಆಡಳಿತದ ವತಿಯಿಂದ ವೀರಾಜಪೇಟೆ ಜೂನಿಯರ್ ಕಾಲೇಜು ಮೈದಾನದಲ್ಲಿ ಆಟೋ ಚಾಲಕರಿಗೆ ಪಡಿತರ ಕಿಟ್ ವಿತರಿಸಿ ಮಾತನಾಡಿದ ಅವರು ನಮ್ಮ ಜಿಲೆಯಲ್ಲಿ ಕೋವಿಡ್ 19 ನ್ನು ಸಮರ್ಥವಾಗಿ ನಿಭಾಯಿಸಿದ್ದೇವೆ. ನಮ್ಮ ಜಿಲ್ಲೆ ರಾಷ್ಟ್ರದಲ್ಲಿಯೇ ಹಸಿರು ವಲಯ ಬಂದ ಕಾರಣ ಮೂರನೇ ಹಂತದ ಲಾಕ್‍ಡೌನ್‍ನಲ್ಲಿ ಕನಿಷ್ಟÀ ಮಟ್ಟಿಗೆ ಸಡಿಲಿಕೆಗೊಳಿಸಲಾಗಿದೆ. ಲಾಕ್‍ಡೌನ್‍ನ್ನು ಸಮರ್ಥವಾಗಿ ನಿಭಾಯಿಸಿದ ಕಂದಾಯ, ಆರೋಗ್ಯ, ಪೊಲೀಸ್ ಇಲಾಖೆ ಸೇರಿದಂತೆ ಇತರ ಇಲಾಖೆಗಳ ಕಾರ್ಯ ಶ್ಲಾಘನೀಯ ಎಂದು ಹೇಳಿದರು.

ಈ ಸಂದರ್ಭ 450 ಆಟೋ ಚಾಲಕರಿಗೆ ಕಿಟ್ ವಿತರಿಸಲಾಯಿತು. ಆಹಾರ ಕಿಟ್ ವಿತರಣೆಯಲ್ಲಿ ತಹಶೀಲ್ದಾರ್ ನಂದೀಶ್, ಡಿವೈಎಸ್‍ಪಿ ಜಯಕುಮಾರ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಶ್ರೀಧರ್, ಆಟೋ ಚಾಲಕರ ಸಂಘದ ಅಧ್ಯಕ್ಷ ಶಶಿಧರನ್, ಪಟ್ಟಣ ಪಂಚಾಯಿತಿ ಸದಸ್ಯರು ಉಪಸ್ಥಿತರಿದ್ದರು.