ನಾಪೆÇೀಕ್ಲು : ನಾಪೆÇೀಕ್ಲು ವ್ಯಾಪ್ತಿಯಲ್ಲಿ ಬೆಳಿಗ್ಗೆ 9 ಗಂಟೆಯಿಂದಲೇ ಬಿರುಸಿನ ಮದ್ಯ ಮಾರಾಟ ಆರಂಭಗೊಂಡಿತು. ಪುರುಷರು, ಮಹಿಳೆಯರು ಎಂಬ ಬೇಧವಿಲ್ಲದೆ ಎಲ್ಲರೂ ಮದ್ಯ ಖರೀದಿಗೆ ಸರತಿ ಸಾಲಿನಲ್ಲಿ ನಿಂತಿದ್ದುದು ಕಂಡು ಬಂತು.
ಮಧ್ಯಾಹ್ನ 1 ಗಂಟೆ ಸುಮಾರಿಗೆ ಖರೀದಿದಾರರ ಸಂಖ್ಯೆ ಕಡಿಮೆಯಾಯಿತಾದರೂ ಮದ್ಯದ ಅಂಗಡಿಗಳಲ್ಲಿ ದಾಸ್ತಾನು ಕೊರತೆ ಕಂಡು ಬಂತು. ಎಂ.ಎಸ್.ಐ.ಎಲ್ ಅಂಗಡಿಯಲ್ಲಿ U.Á್ರಹಕರು ಕೇಳಿದ ಮದ್ಯ ದೊರೆಯದ ಪರಿಸ್ಥಿತಿ ಎದುರಾಯಿತು.
ಮದ್ಯ ಖರೀದಿಸಲು ಸರತಿ ಸಾಲಿನಲ್ಲಿ ನಿಂತವರ ಪೈಕಿ ಹೆಚ್ಚಿನ ಸಂಖ್ಯೆಯಲ್ಲಿ ಕೂಲಿ ಕಾರ್ಮಿಕರೇ ಇದ್ದರು. ಕೆಲವು ಮಾಲೀಕರು ಮದ್ಯ ಖರೀದಿಸಲು ಸರತಿ ಸಾಲಿನಲ್ಲಿ ನಿಲ್ಲಲು ಮುಜುಗರಗೊಂಡು ಕಾರ್ಮಿಕರನ್ನು ಮದ್ಯ ಖರೀದಿಗೆ ನಿಲ್ಲಿಸಿದ ಬಗ್ಗೆ ತಿಳಿದು ಬಂತು.
ಒಂದೇ ದಿನದಲ್ಲಿ ದಾಸ್ತಾನು ಖಾಲಿಯಾಗಿದೆ. ಗ್ರಾಹಕರಿಗೆ ಬೇಕಾದ ಮದ್ಯ ನೀಡಲು ಸಾಧ್ಯವಾಗಿಲ್ಲ. ನಿರೀಕ್ಷೆಗೂ ಮೀರಿ ಮದ್ಯ ಖರೀದಿಗೆ ಜನ ಆಗಮಿಸಿದ್ದಾರೆ. ಎಲ್ಲರನ್ನು ಅಂತರ ಕಾಯ್ದುಕೊಳ್ಳುವಂತೆ ವ್ಯವಸ್ಥೆಗೊಳಿಸಲಾಗಿದೆ. ಎಲ್ಲರಿಗೂ ಸ್ಯಾನಿಟೈಸರ್ ನೀಡಲಾಗಿದೆ ಎಂದು ನಾಪೆÇೀಕ್ಲು ಎಂ.ಎಸ್.ಐ.ಎಲ್ ಮದ್ಯದ ಅಂಗಡಿಯ ಡಿ.ಇ.ಒ ಎ.ಎಂ.ಸೋಮಯ್ಯ ‘ಶಕ್ತಿ’ಗೆ ತಿಳಿಸಿದರು. - ಪ್ರಭಾಕರ್