ನಾಪೋಕ್ಲು, ಮೇ 5: ಕಕ್ಕಬ್ಬೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಜೀಪೊಂದು ಉರುಳಿಬಿದ್ದು ಕಾರ್ಮಿಕರಿಗೆ ಗಾಯಗಳಾದ ಘಟನೆ ಸಂಭವಿಸಿದೆ.
ಕಕ್ಕಬ್ಬೆ ನಿವಾಸಿ ಬಿ.ಯು.ಬೆಲ್ಲುಪೂವಪ್ಪ ಎಂಬವರು ತಮ್ಮ ತೋಟದಲ್ಲಿ ಕೆಲಸ ಮಾಡುತ್ತಿದ್ದ ಏಳು ಕಾರ್ಮಿಕರನ್ನು ತಮ್ಮ ಜೀಪಿನಲ್ಲಿ (ಕೆ.ಎ.ಎಂ.9353) ಇಂದು ಸಂಜೆ ಕರೆತರುತ್ತಿದ್ದಾಗ ಇಗ್ಗುತಪ್ಪ ದೇವಾಲಯದ ಮಲ್ಮ ಬೆಟ್ಟದ ಇಳಿಜಾರಿನಲ್ಲಿ ಬಿ.ಯು.ಬೆಲ್ಲುಪೂವಪ್ಪ (ಚಾಲಕನ) ನಿಯಂತ್ರಣ ತಪ್ಪಿ ಉರುಳಿಬಿದ್ದಿದ್ದು ಕಾರ್ಮಿಕರಿಗೆ ಗಾಯಗಳಾಗಿವೆ.ಕಾರ್ಮಿಕರು ನಾಪೋಕ್ಲುವಿನ ಇಂದಿರಾನಗರದ ನಿವಾಸಿಗಳಾಗಿದ್ದು, ನಾಪೋಕ್ಲುವಿನಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಮಡಿಕೇರಿಗೆ ಕರೆದೊಯ್ಯಲಾಗಿದೆ. ನಾಪೋಕ್ಲು ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.