ಸೋಮವಾರಪೇಟೆ, ಮೇ 3: 2020ನೇ ಸಾಲಿನ ಎಸ್ಎಸ್ಎಲ್ಸಿ ಅಂತಿಮ ಪರೀಕ್ಷೆಯನ್ನು ವಿದ್ಯಾರ್ಥಿಗಳು ಯಶಸ್ವಿಯಾಗಿ ಎದುರಿಸುವದು, ಪೋಷಕರು ಮತ್ತು ವಿದ್ಯಾರ್ಥಿಗಳಲ್ಲಿ ಮೂಡಿರುವ ಗೊಂದಲಗಳನ್ನು ನಿವಾರಿಸುವದು, ಕ್ಲಿಷ್ಟಕರ ಪ್ರಶ್ನೆಗಳಿಗೆ ಸೂಕ್ತ ಉತ್ತರ ಒದಗಿಸುವ ನಿಟ್ಟಿನಲ್ಲಿ ತಾ. 6 ಮತ್ತು 7 ರಂದು ಸೋಮವಾರಪೇಟೆ ತಾಲೂಕು ಮಟ್ಟದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ಸಂಬಂಧ ಫೋನ್ ಇನ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಪಾಂಡು ತಿಳಿಸಿದ್ದಾರೆ.
ತಾ. 6 ರಂದು ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಗಣಿತ ವಿಷಯ, ತಾ. 7 ರಂದು ಬೆಳಿಗ್ಗೆ 11 ರಿಂದ ಮಧ್ಯಾಹ್ನ 1 ರವರೆಗೆ ವಿಜ್ಞಾನ ವಿಷಯಕ್ಕೆ ಸಂಬಂಧಿಸಿದಂತೆ ಶಿಕ್ಷಣಾಧಿಕಾರಿಗಳು, ಸಂಬಂಧಿತ ವಿಷಯ ತಜ್ಞರ ಜತೆಗೂಡಿ ಫೋನ್ ಇನ್ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಎಸ್ಎಸ್ಎಲ್ಸಿ ಪರೀಕ್ಷೆ ಸಂಬಂಧಿತ ಪ್ರಶ್ನೆ, ಗೊಂದಲಗಳಿದ್ದರೆ ವಿದ್ಯಾರ್ಥಿಗಳು-ಪೋಷಕರು ನಿಗದಿತ ದಿನಗಳಂದು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ದೂರವಾಣಿ ಸಂಖ್ಯೆ 08276 282162, ಕಚೇರಿ ಸಹಾಯಕರು-9480426663ನ್ನು ಸಂಪರ್ಕಿಸಬಹುದು, ಇದರೊಂದಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೊಬೈಲ್ 9448390766 ಸಂಖ್ಯೆಗೆ ಪ್ರಶ್ನೆಗಳನ್ನು ವಾಟ್ಸಾಪ್ ಮಾಡಿ ಉತ್ತರ ಪಡೆಯಬಹುದಾಗಿದೆ.