ಕೂಡಿಗೆ, ಮೇ 3: ಮೈಸೂರು - ಕೊಡಗಿನ ಭಾಗವಾದ ಹೆಬ್ಬಾಲೆಯ ತಪಾಸಣಾ ಕೇಂದ್ರದಲ್ಲಿ ಪೆÇೀಲಿಸ್ ಇಲಾಖೆಯ ವತಿಯಿಂದ ಕಟ್ಟುನಿಟ್ಟಿನ ತಪಾಸಣಾ ಕಾರ್ಯ ನಡೆಯುತ್ತಿದೆ.

ಕೊಡಗಿನಿಂದ ಮೈಸೂರು ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಈ ಮಾರ್ಗದಲ್ಲಿ ಪೆÇಲೀಸ್ ಇಲಾಖೆ, ಅರಣ್ಯ ಇಲಾಖೆ, ಆಶಾ ಕಾರ್ಯಕರ್ತೆಯರು ಜಿಲ್ಲೆಗೆ ಬರುವ ಮತ್ತು ಹೋಗುವ ಅನುಮತಿ ಪತ್ರ ಇರುವ ವಾಹನಗಳನ್ನು ತಪಾಸಣೆ ಮಾಡಿ ನೋಂದಣಿ ಮಾಡಿ ಕಳುಹಿಸುವ ವ್ಯವಸ್ಥೆ ನಡೆಯುತ್ತಿದೆ.

ಹೆಬ್ಬಾಲೆ ಗ್ರಾಮ ಪಂಚಾಯತಿ ವತಿಯಿಂದ ಹೆಬ್ಬಾಲೆ - ಸೂಳೆ ಕೋಟೆ ಮಾರ್ಗವಾಗಿ ಮೈಸೂರು ಜಿಲ್ಲೆಗೆ ಹೋಗುವ ಮಾರ್ಗದ ತಪಾಸಣೆಗೆ ಅನುಕೂಲವಾಗುವಂತೆ ಶೆಡ್ ನಿರ್ಮಾಣ ಮಾಡಿ ವಿದ್ಯುತ್ ವ್ಯವಸ್ಥೆ ಮಾಡಲಾಗಿದೆ. ಅದರಂತೆ ಪೆÇಲೀಸ್ ಇಲಾಖೆಯ ವತಿಯಿಂದ ಸಿಸಿ ಕ್ಯಾಮರಾ ಅಳವಡಿಸಲಾಗಿದೆ.

ಹೆಬ್ಬಾಲೆ ಕಾವೇರಿ ನದಿಯ ದಡದ ಸಮೀಪದ ಸೇತುವೆ ಹತ್ತಿರ ತಪಾಸಣೆ ಕೇಂದ್ರವನ್ನು ತೆರೆಯಲಾಗಿದೆ. ಮೈಸೂರು ಜಿಲ್ಲೆಯು ಕೆಂಪು ಭಾಗಕ್ಕೆ ಸೇರಿರುವುದರಿಂದ ಜಿಲ್ಲೆಯ ಕಡೆಗೆ ಬರುವವರನ್ನು ಕಟ್ಟುನಿಟ್ಟಾಗಿ ತಪಾಸಣೆ ಮಾಡಲಾಗುತ್ತಿದೆ.

ಕುಶಾಲನಗರ ಗ್ರಾಮಾಂತರ ಪೆÇಲೀಸ್ ಠಾಣಾಧಿಕಾರಿ ನಂದೀಶ್ ಕುಮಾರ್ ಮತ್ತು ಸಿಬ್ಬಂದಿಗಳ ನೇತೃತ್ವದಲ್ಲಿ ತಪಾಸಣೆ ನೆಡೆಯುತ್ತಿದೆ.

ಆರೋಗ್ಯ ಇಲಾಖೆಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಸಾರ್ವಜನಿಕರ, ನೊಂದಣಿ ಮತ್ತು ಅವರ ಜ್ವರ ಪರೀಕ್ಷೆ ನಡೆಸುತ್ತಿದ್ದಾರೆ. ಈಗಾಗಲೇ ಅನುಮತಿ ಪತ್ರ ಪಡೆದು ಹೋಗುವ 150ಕ್ಕೂ ಹೆಚ್ಚು ಜನರನ್ನು ತಪಾಸಣೆಗೆ ಒಳಪಡಿಸಿದ್ದಾರೆ.