ಸಿದ್ದಾಪುರ, ಮೇ 2: ‘ಶಕ್ತಿ’ ವರದಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ ಅವರು ಮಾಲ್ದಾರೆ ಹಂಚೆತಿಟ್ಟು ವಿಠಲನ ಸಮಸ್ಯೆಗಳಿಗೆ ಸ್ಪಂದಿಸಿ ಮಾನವೀಯತೆ ಮೆರೆದಿದ್ದಾರೆ.
ತಾ 30ರಂದು ಶಕ್ತಿಯಲ್ಲಿ ಪ್ರಕಟವಾದ ಹಂಚೆತಿಟ್ಟು ಹಾಡಿಯ ನಿವಾಸಿ ವಿಠಲ ಎಂಬವರು ಮರದಿಂದ ಬಿದ್ದು ಎರಡು ಕಾಲುಗಳ ಸ್ವಾಧೀನವನ್ನು ಕಳೆದು ಕೊಂಡು ಕಳೆದ 13 ವರ್ಷಗಳಿಂದ ಹಾಸಿಗೆಯಲ್ಲಿ ಮಲಗಿದ್ದಾರೆ.
ಈ ಬಗ್ಗೆ ‘ಶಕ್ತಿ’ಯು ವಿಠಲನ ಸಮಸ್ಯೆ ಬಗ್ಗೆ ಸಮಗ್ರ ವರದಿ ಪ್ರಕಟಿಸಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಸ್ಪಂದಿಸಿ ಅಮ್ಮತ್ತಿ ಹೋಬಳಿಯ ಕಂದಾಯ ಪರೀಕ್ಷಕ ಎಂ.ಎಲ್. ಹರೀಶ್ ಅವರನ್ನು ವಿಠಲನ ಮನೆಗೆ ಕಳಿಸಿ ಅವರ ಕುಟುಂಬಕ್ಕೆ ಅಗತ್ಯ ವಸ್ತುಗಳ ಆಹಾರ ಪದಾರ್ಥಗಳನ್ನು ಒದಗಿಸಿ ಕೊಡುವಲ್ಲಿ ಮುತುವರ್ಜಿ ವಹಿಸಿದರು.
ಅಲ್ಲದೆ ಅವರ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದುಕೊಂಡರು ಇದಲ್ಲದೆ ಮುಂದಿನ ದಿನಗಳಲ್ಲಿ ಅವರಿಗೆ ನಡೆದಾಡಲು ಬೇಕಾದಂತಹ ಗಾಲಿ ಕುರ್ಚಿ ನೀಡುವುದಾಗಿ ಕೂಡ ಭರವಸೆಯನ್ನು ನೀಡಿದ್ದಾರೆ.
- ವರದಿ :ವಾಸು