ಕೂಡಿಗೆ, ಮೇ 2: ಕೂಡಿಗೆ-ಕೂಡು ಮಂಗಳೂರು, ಹೆಬ್ಬಾಲೆ ವ್ಯಾಪ್ತಿಯಲ್ಲಿ ಭಾರೀ ಗಾಳಿ ಮಳೆಗೆ ಅನೇಕ ಮರಗಳು ನೆಲಕ್ಕೆ ಉರುಳುವುದರ ಜೊತೆಗೆ ನೀರು ಸರಾಗವಾಗಿ ಹರಿಯಲು ಒಳಚರಂಡಿ ವ್ಯವಸ್ಥೆಯಿಲ್ಲದೆ ಅಂಗಡಿ ಮಳಿಗೆಗಳಿಗೆ ನೀರು ನುಗ್ಗಿದ ಘಟನೆಗಳು ನಡೆದಿವೆ.

ಕುಶಾಲನಗರ ಹೋಬಳಿ ವ್ಯಾಪ್ತಿಯ ಕೂಡಿಗೆ ಸೇರಿದಂತೆ ನಾಲ್ಕು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಂದು ಇಂಚಿಗೂ ಅಧಿಕ ಮಳೆ ಬಿದ್ದಿದೆ. ಕೂಡುಮಂಗಳೂರು ಗ್ರಾಮ ಪಂಚಾಯಿತಿ ಸಮೀಪದ ಕೂಡಿಗೆ ಡೈರಿ ಸರ್ಕಲ್‍ನ ಹತ್ತಿರದಲ್ಲಿ ಒಳಚರಂಡಿ ವ್ಯವಸ್ಥೆ ಇಲ್ಲದೆ ಅಂಗಡಿ ಮಳಿಗೆಗಳಿಗೆ ಚರಂಡಿಯಲ್ಲಿ ಹೋಗಬೇಕಾಗಿದ ನೀರು ರಸ್ತೆಯ ಮೇಲೆ ಹರಿದು ಮನೆಗಳಿಗೆ ನುಗ್ಗುವುದಲ್ಲದೆ ಬೇರೆ ಕಡೆಗಳಲ್ಲಿ ಹರಿದು ಭಾರೀ ಅನಾಹುತ ಉಂಟಾಗಿದೆ. ಚರಂಡಿಯಲ್ಲಿ ನೀರು ಹೋಗಲಾಗದೆ ಅದರ ಪಕ್ಕದಲ್ಲಿದ ಸಣ್ಣ ಪೆಟ್ಟಿಗೆ ಅಂಗಡಿ ಬೇರೆಡೆಗೆ ತಳಲ್ಪಟಿವೆ. ಇದರಿಂದಾಗಿ ಸಣ್ಣ ವ್ಯಾಪಾರಿಗಳಿಗೆ ಬಾರಿ ತೊಂದರೆ ಉಂಟಾಗಿದೆ.