ವೀರಾಜಪೇಟೆ, ಮೇ 2: ಚಿಕ್ಕಮಗಳೂರಿನಿಂದ ಬಂದ ಕಾರ್ಮಿಕನೊಬ್ಬ ಇಲ್ಲಿನ ದೊಡ್ಡಟ್ಟಿ ಚೌಕಿ ಬಳಿಯ ಹೊರ ರಾಜ್ಯದ ಸ್ನೇಹಿತರ ಕೊಠಡಿಯಲ್ಲಿ ಎರಡು ದಿನಗಳ ಹಿಂದೆ ತಂಗಿದ್ದು ಈ ಕಾರ್ಮಿಕನು ಸೇರಿದಂತೆ ಕೊಠಡಿಯಲ್ಲಿದ್ದ ಮೂವರನ್ನು ಸಾರ್ವಜನಿಕ ಆಸ್ಪತ್ರೆಯಲ್ಲಿ ತಪಾಸಣೆ ನಡೆಸಿ ಬಿ.ಸಿ.ಎಂ. ವಸತಿ ಗೃಹದಲ್ಲಿ ಕ್ವಾರಂಟೈನ್‍ನಲ್ಲಿರಿಸಲಾಗಿದೆ. ಚಿಕ್ಕಮಗಳೂರಿನಿಂದ ಬಂದು ಸ್ನೇಹಿತರ ಕೊಠಡಿಯಲ್ಲಿದ್ದು ಇಲ್ಲಿನ ದೊಡ್ಡಟ್ಟಿ ಚೌಕಿನಲ್ಲಿ ನಿನ್ನೆ ದಿನ ನಿಂತಿದ್ದ ಕಾರ್ಮಿಕನನ್ನು ಇಲ್ಲಿನ ನಗರ ಪೊಲೀಸರು ವಿಚಾರಣೆಗೊಳಪಡಿಸಿದ ನಂತರ ಮೂವರನ್ನು ತಹಶೀಲ್ದಾರ್ ವಶಕ್ಕೆ ಒಪ್ಪಿಸಿದ್ದರು.