ಇಡೀ ವಿಶ್ವವನ್ನೇ ಕಪಿ ಮುಷ್ಟಿಯಲ್ಲಿ ಬಂಧಿಸಿ ವಿಲ ವಿಲ ಒದ್ದಾಡುವಂತೆ ಮಾಡುತ್ತಾ ತನ್ನ ವಂಶವನ್ನು ಸಮೃದ್ಧಿಗೊಳಿಸಲು ದೇಶ, ಭಾಷೆ, ಬಣ್ಣ, ಬಡವ, ಬಲ್ಲಿದ, ಧರ್ಮವೆನ್ನದೆ ಭೂಮಂಡಲವನ್ನೇ ಆವರಿಸಲು ಹೊಂಚು ಹಾಕುತ್ತಿರುವ ಕೊರೊನಾ ವೈರಾಣು ಮಕ್ಕಳಾದಿಯಾಗಿ ವಯೋವೃದ್ಧರವರೆಗೂ ಬೆಚ್ಚಿ ಬೀಳಿಸುತ್ತಿರುವುದಕ್ಕೆ ಸಾಕ್ಷಿಯಾಗುತಿದ್ದೇವೆ.

ಮಹಿಳೆಯರಿಗಂತೂ ಎಲ್ಲಾ ಕಾಲವೂ ಬಿಡುವಿಲ್ಲದ ಕೆಲಸಗಳೇ ಬಿಡಿ. ಮನೆಮಂದಿಯೆಲ್ಲರ ತೃಪ್ತಿಯ ಹೊಣೆ ಹೊತ್ತು ಕಾಯಕವೇ ಕೈಲಾಸವೆಂದು ಹೊಸ ಸಾಧ್ಯತೆಗಳತ್ತ ಹೊರಳಿಕೊಳ್ಳುತ್ತಾಳೆ. ಆಕೆ ದಿನಕ್ಕೊಂದು ಹೊಸ ರುಚಿಯ ಶೋಧ ನಡೆಸುತ್ತಾ ಕಾಡು ಅಡುಗೆಯನ್ನೂ ಮಾಡುವುದಲ್ಲದೇ ಯೂಟ್ಯೂಬ್ ಮಾರ್ಗದರ್ಶನದಲ್ಲಿ ಬೇರೆ-ಬೇರೆ ಖಾದ್ಯಗಳ ಪಾಠ ಕೇಳುತ್ತಲೇ ಪರೀಕ್ಷಿಸುತ್ತಿರುವುದು ಗೆಳತಿಯರ ಲವಲವಿಕೆಯ ಸಂಭಾಷಣೆಯಿಂದ ಹೊರಬೀಳುತ್ತವೆ. ಪಾನಿಪೂರಿ ಮಾಡುವುದರಲ್ಲೂ ಕೂಡಾ ಪಳಗಿ ಮುಂದೆ ಪಾನಿಪೂರಿ ಅಂಗಡಿಯವನಿಗೂ ನಷ್ಟ ಸಂಭವಿಸಬಹುದೇನೋ ಎಂಬ ಕಳವಳ ಶುರು ಹಚ್ಚಿಬಿಟ್ಟಿದೆ. ಏಕೆಂದರೆ ಎಲ್ಲವನ್ನೂ ಮನೆಯಲ್ಲೇ ಸುಲಭ ವಾಗಿಸುವತ್ತ ಸಮಯ ಮತ್ತು ಮೊಬೈಲ್ ದಾರಿ ತೋರಿದೆ. ಹಾಗೆಯೇ ಗೆಳತಿಯೊಬ್ಬಳು ಅಚ್ಚರಿಯಿಂದ ಹೇಳುತ್ತಾಳೆ. ‘‘ನಮ್ಮ ಊರಿನಲ್ಲಿ ಪ್ರತಿದಿನ ತೆರೆದಿರುತಿದ್ದ ತರಕಾರಿ ಅಂಗಡಿಯಲ್ಲಿ ಒಂದು ಜನವೂ ಇರುತ್ತಿರಲಿಲ್ಲ. ಈಗ ವಾರದ ಮೂರು ದಿನ ಹನ್ನೆರಡು ಗಂಟೆಯವರೆಗೆ ಮಾತ್ರ ತೆಗೆಯುವ ಅಂಗಡಿ ತೆರೆದಾಗಿನಿಂದ ಮುಚ್ಚುವವರೆಗೂ ಜನ ಮುಗಿ ಬಿದ್ದಿರುತ್ತಾರೆ.ಅಂದರೆ ಮುಂದೆ ಸಿಗದೆ ಹೋದರೆ ಎಂಬ ಭಯದಿಂದ ಕೂಡಿಸಿಡುತ್ತಾರೋ ಗೊತ್ತಿಲ್ಲ.” ಎನ್ನುತ್ತಾಳೆ.

ಎಲ್ಲರ ಎದೆಯೊಳಗೆ ಕೊರೊನಾ ಬಿತ್ತಿದ ಭೀತಿ ಬೆಳೆದು ಯುಗಾದಿ, ವಿಷು, ಗುಡ್‍ಫ್ರೈಡೆ ಹಬ್ಬಗಳು ಸದ್ದು ಮಾಡದೆ ಹಾಜರಿ ಹಾಕಿ ಸರಿದು ಹೋದವು. ಸದ್ಯದಲ್ಲಿಯೇ ಬರಲಿರುವ ರಂಜಾನ್ ಆದರೂ ನಗುಮೊಗದ ಚಂದಿರನನ್ನು ಹೊತ್ತು ತರುವುದೇ ? ಹಳ್ಳಿಯಲ್ಲಿ ಕೊರೊನಾ ಅಷ್ಟೊಂದು ಸಂಚಲನ ಮೂಡಿಸದಿದ್ದರೂ ಸುದ್ದಿ ತಿಳಿಯುತ್ತಲೇ” ಕಾಲ ಕೆಟ್ಟೋಯಿತೆಂದು” ಅಜ್ಜ ಅಜ್ಜಿಯರು ಗೊಣಗುತ್ತಲೇ ಇದ್ದಾರೆ. ವಾರಕ್ಕೊಮ್ಮೆ ಪೇಟೆ ಕಾಣುವ ಮಂದಿ ಈ ವಯಸ್ಸಿನವರೆಗೂ ಕಂಡೂ ಕೇಳರಿಯದ ಪದಗಳಿಗೂ, ಬದಲಾವಣೆಗೂ ಮೂಗಿನ ಮೇಲೆ ಬೆರಳಿಟ್ಟು ದಿಗಿಲುಗೊಂಡಿದ್ದಾರೆ. ಹಬ್ಬಗಳಲ್ಲೂ ಒಂದಾಗದಂತೆ, ಅಗಲಿದವರ ಅಂತ್ಯ ಭೇಟಿಗೂ ಸಾಧ್ಯವಾಗ ದಂತೆ ಮಾಡಿರುವ ಈ ಜೀವಿ ಬದುಕಿನಲ್ಲಿ ಏನೇನೆಲ್ಲಾ ಕಲಿಸಿ ಬಿಟ್ಟಿತು? ಮನೆಯೊಳಗೆ ಪರಸ್ಪರ ಅವಲಂಬನೆಯ ಬಗೆಯಂತೂ ಚೆನ್ನಾಗಿ ಅನುಭವಿಸುತ್ತಿದ್ದೇವೆ. ಅತಿಥಿ ಸತ್ಕಾರಕ್ಕೆ ಹೆಸರಾಗಿರುವ ಕೊಡಗು ಈಗ ಅಪ್ಪಿತಪ್ಪಿ ಯಾರಾದರೂ ಮನೆಗೆ ಬರುತ್ತಾರೆಂದರೆ ಹೇಳಲಾಗದ ಸಂಕಟ. ಪ್ರೀತಿಯಿಂದ ಆತಿಥ್ಯ ಮಾಡುತಿದ್ದ ನಮಗೀಗ ಪ್ರತಿಯೊಬ್ಬರ ಮೇಲೂ ಗುಮಾನಿ.ಬಂದವರು ಒಮ್ಮೆ ಕೆಮ್ಮಿದರೂ ಸಾಕು ನಮ್ಮ ಉಸಿರು ನೆಟ್ಟಗಿರಲ್ಲ.

ನಮ್ಮಲ್ಲಿ ಬಹತೇಕರ ಟoಛಿಞ ಜoತಿಟಿ ಜಚಿಥಿs ಸದ್ಬಳಕೆಯಾಗಿದೆ. ಮನೆಯಾವರಣದಲ್ಲಿ ನೆನೆಗುದಿಗೆ ಬಿದ್ದಿದ್ದ ಕೆಲಸಗಳೆಲ್ಲಾ ರಂಗು-ರಂಗಾಗಿ ಥಳುಕು ಕಾಣುತ್ತಿದೆ. ಅನೇಕರು ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದರ ಮೂಲಕ ಇತರರಿಗೂ ಸ್ಪೂರ್ತಿಯಾಗಿದ್ದಾರೆ. ಸಹಾಯ ಅನ್ನೋದು ಕ್ಯಾಮರಾದಿಂದ ದೂರವಿದ್ದರೆ ಮತ್ತಷ್ಟು ಆತ್ಮ ತೃಪ್ತಿ ದೊರೆಯಬಹುದೇನೋ. ಸಾಹಿತ್ಯ ಪ್ರೇಮಿಗಳಿಗಂತೂ ಕೆಲಸದ ಒತ್ತಡ ಹಾಗೂ ಸಮಯದ ಅಭಾವದಿಂದ ಓದಲಾಗದೆ ಬದಿಗಿಟ್ಟ ಪುಸ್ತಕಗಳನ್ನು ಮನಸೋ ಇಚ್ಛೆ ಓದುವ ಅವಕಾಶ.ಈ ಧ್ಯಾನಸ್ಥ ಸ್ಥಿತಿಯನ್ನು ಅನುಭವಿಸಿದವರು ಓದಿನ ಮಜವನ್ನು ಹಂಚಿಕೊಳ್ಳುವಾಗ ಓದಿನ ಗೀಳು ಇಲ್ಲದವರಿಗೂ ಕೂಡಾ ಓದಬೇಕೆನಿಸುತ್ತದೆ.

ಅಂಗೈಯೊಳಗೆ ಮೊಬೈಲ್ ಇದ್ದರಂತೂ ಬೇಜಾರೇ ಇಲ್ಲಬಿಡಿ.ಮೊನ್ನೆ ಮೊನ್ನೆ ಊರಿನ ಅಜ್ಜಿಗೆ ಕರೆಮಾಡಿ ಮಾತನಾಡುವಾಗ ಮಳೆಗಾಲಕ್ಕಾಗಿ ಸಂಡಿಗೆ ಮಾಡಿಡುವ ಬಗೆ ಹೇಳುತ್ತಾ ನೀನು ಮಾಡು ಎಂದು ಹೇಳಿ ವಿಧಾನವನ್ನೂ ವಿವರಿಸಿಬಿಟ್ಟರು. ಅಡುಗೆ ಮಾಡಿ, ತೊಳೆದು ಜಡ್ಡುಗಟ್ಟಿ ಹೈರಾಣಾಗಿದ್ದೇನೆಂದು ಹೇಳಿದರೆ ಅವರೇನು ಒಪ್ಪುವರೇ ?

ಒಮ್ಮೆ ಹೀಗೆ ಆತ್ಮೀಯರ ವಾಟ್ಸಾಪ್ ಗ್ರೂಪೆÇಂದರಲ್ಲಿ ಕೊರೊನಾ ಪುರಾಣ ಚರ್ಚಿಸುತ್ತಾ ನಾಳೆ ಬೆಳಗಿನ ತಿಂಡಿಯಿಂದ ರಾತ್ರಿ ಊಟದವರೆಗಿನ ಎಲ್ಲಾ ಅಡುಗೆಯನ್ನು ಪುರುಷರೇ ನಿಭಾಯಿಸಿ ಸೆಲ್ಫಿ ತೆಗೆದು ಹಾಕಿ ಎಂದು ಅನಿಸಿಕೆ ಬರೆದು ಪೆÇೀಸ್ಟ್ ಮಾಡಿಬಿಟ್ಟೆ. ಕೆಲವು ಹಾಸ್ಯ, ಹಾರಿಕೆಯ ಉತ್ತರವನ್ನು ಬಿಟ್ಟರೆ ಸೆಲ್ಫಿಗಾಗಿ ಕಾದಿದ್ದೇ ಬಂತು. ಅಡುಗೆ ಮನೆಯೊಳಗಿನ ಮಹಾರಾಣಿ ಯಾವತ್ತೂ ಹೆಣ್ಣೆ uಟಿಜeಜಿiಟಿeಜ.ಅವಳ ಚಾಕಚಕ್ಯತೆಗೆ, ಅಚ್ಚುಕಟ್ಟುತನಕ್ಕೆ ಇಡೀ ಮನೆಯ ವ್ಯವಸ್ಥೆಯೇ ಒಗ್ಗಿಬಿಟ್ಟಿರುತ್ತದೆ. ಇದು ಮನೆ ಹಿರಿಯರ ವಾದವೂ ಕೂಡ. ಒಂದಂತೂ ನಿಜ, ನಮ್ಮ ಯಾವ ಹಿರಿಯರು ಕೂಡಾ ಬದುಕಿನಲ್ಲಿ ಎದುರಿಸದ ವಿಚಿತ್ರ ಅನುಭವ ನಮ್ಮ ಪಾಲಿಗೆ ಬಂದಿದೆ. ಮುಂದಿನ ದಿನಗಳಲ್ಲಿ ಪಠ್ಯಪುಸ್ತಕ ದೊಳಗೂ ಸೇರಿ ಇತಿಹಾಸವಾಗಲಿರುವ ಕೊರೊನಾ ಕಹಾನಿ ಮಕ್ಕಳಿಗೆ ಅಗತ್ಯ ಪಾಠವಾಗುವುದಂತೂ ದಿಟ.

?ಸುನೀತ ಕುಶಾಲನಗರ