ಶನಿವಾರಸಂತೆ, ಏ. 30: ನಿಡ್ತ ಪಂಚಾಯಿತಿ ವ್ಯಾಪ್ತಿಯ ಹಿತ್ತಲಕೇರಿ ಗ್ರಾಮದ ಹೆಚ್.ಎಸ್. ಲೋಹಿತ್, ಹೆಚ್.ಆರ್. ಸುರೇಶ್ ಎಂಬವರುಗಳು ಕಳೆದ ರಾತ್ರಿ ಮಾಲಂಬಿ ರಕ್ಷಿತಾರಣ್ಯದಲ್ಲಿ ಅಕ್ರಮವಾಗಿ ಮಲಬಾರ್ ಪುನುಗು ಬೆಕ್ಕನ್ನು ಗುಂಡು ಹೊಡೆದು ಹತ್ಯೆಗೈದು ಮಾಂಸ ಮಾಡಿ ಕೊಂಡೊಯ್ಯುತ್ತಿದ್ದಾಗ ಶನಿವಾರಸಂತೆ ಅರಣ್ಯ ವಲಯಾಧಿಕಾರಿ ಕೆ. ಕೊಟ್ರೇಶ್ ಹಾಗೂ ಸಿಬ್ಬಂದಿ ಆರೋಪಿಗಳನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.ಈ ಮಲಬಾರ್ ಪುನುಗು ಬೆಕ್ಕು ಭಾರತದಲ್ಲೇ ಅತೀ ವಿರಳವಾದ ಪ್ರಾಣಿಯಾಗಿದೆ ಎಂದು ಅಧಿಕಾರಿ ಕೊಟ್ರೇಶ್ ‘ಶಕ್ತಿ’ಗೆ ತಿಳಿಸಿದರು. ಆರೋಪಿಗಳಿಬ್ಬರು ಕೋವಿಯಿಂದ ಗುಂಡು ಹೊಡೆದು ಬೆಕ್ಕನ್ನು ಬೇಟೆಯಾಡಿ ಮಾಂಸ ಮಾಡಿ ಮನೆಗೆ ಕೊಂಡೊಯ್ಯುತ್ತಿದ್ದಾಗ ಬಂಧಿಸ ಲಾಗಿದ್ದು, ಅರಣ್ಯ ವಲಯಾಧಿಕಾರಿ ಕೆ. ಕೊಟ್ರೇಶ್, ಉಪ ವಲಯಾಧಿಕಾರಿ ಗೋವಿಂದರಾಜ್, ಅರಣ್ಯ ರಕ್ಷಕರಾದ ವೆಂಟಕೇಶ್, ನಾಗರಾಜ್, ರಮೇಶ್, ಗಣೇಶ್ ಮತ್ತು ಆರ್ಆರ್ಟಿ ಸಿಬ್ಬಂದಿಗಳಾದ ದೇವಿಕಾಂತ್, ಕೀರ್ತಿ, ಹರ್ಷಿತ, ಯತೀಶ್ ಹಾಗೂ ಚಾಲಕ ಹರೀಶ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಆರೋಪಿಗಳಿಂದ ಪುನುಗು ಬೆಕ್ಕು, ಕೋವಿ, 1 ಟಾರ್ಚ್ ಹಾಗೂ ಬೈಕನ್ನು (ನಂ. ಕೆ.ಎ. 12. ಕೆ. 0171) ವಶಪಡಿಸಿಕೊಳ್ಳಲಾಗಿದೆ.