ಸಿದ್ದಾಪುರ,ಏ. 30 : ‘ಶಕ್ತಿ’ಯಲ್ಲಿ ಪ್ರಕಟಗೊಂಡ ವರದಿಗೆ ಸ್ಪಂದಿಸಿದ ಆರೋಗ್ಯ ಇಲಾಖೆ ಅಧಿಕಾರಿಗಳು ಗುರುವಾರದಂದು ಮಾಲ್ದಾರೆ ಹಂಚಿ ತಿಟ್ಟು ಹಾಡಿಯಲ್ಲಿ ಎರಡು ಕಾಲುಗಳ ಸ್ವಾಧೀನ ಕಳೆದುಕೊಂಡು ಮಲಗಿರುವ ವಿಠಲ ಅವರ ಮನೆಗೆ ಭೇಟಿ ನೀಡಿದ್ದರು.
ಹಾಡಿಯ ನಿವಾಸಿ ವಿಠಲ ಕಳೆದ 13 ವರ್ಷಗಳ ಹಿಂದೆ ಮರಗೆಲಸ ಮಾಡುವಾಗ ಮರದಿಂದ ಬಿದ್ದು ಎರಡು ಕಾಲುಗಳ ಸ್ವಾಧೀನ ಕಳೆದುಕೊಂಡು ಮನೆ ಹಾಸಿಗೆಯಲ್ಲಿ ಮಲಗಿದ್ದರು. ಇವರ ಸಮಸ್ಯೆ ಬಗ್ಗೆ ‘ಶಕ್ತಿ’ಯು ತಾ.30 ರಂದು ವರದಿ ಪ್ರಕಟಿಸಿತ್ತು ಈ ಹಿನ್ನೆಲೆಯಲ್ಲಿ ಮಾಲ್ದಾರೆ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ ಶೃಂಗ ಶ್ರೀ ಹಾಗೂ ಆರೋಗ್ಯ ನಿರೀಕ್ಷಕ ಸುದರ್ಶನ್ ರವರು ಭೇಟಿ ನೀಡಿ ವಿಠಲ ಅವರ ಆರೋಗ್ಯದ ಬಗ್ಗೆ ಮಾಹಿತಿ ಪಡೆದುಕೊಂಡರು.