ಗೋಣಿಕೊಪ್ಪಲು, ಏ. 30: ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಆವರಣದಲ್ಲಿ ಇದೇ ಮೊದಲ ಬಾರಿಗೆ ಟಾಸ್ಕ್ ಫೆÇೀರ್ಸ್ ಸಮಿತಿಯ ವತಿಯಿಂದ ಸಭೆ ನಡೆಯಿತು.
ಸಭೆಯಲ್ಲಿ ಪ್ರಮುಖವಾಗಿ ತರಕಾರಿ ವ್ಯಾಪಾರವನ್ನು ಹರಿಶ್ಚಂದ್ರ ಪುರದ ಕೃಷಿ ಉತ್ಪನ್ನ ಮಾರುಕಟ್ಟೆಗೆ ಸ್ಥಳಾಂತರ ಮಾಡಿದ ಬಳಿಕ ನಗರದ ಜನರು ಅನುಭವಿಸುತ್ತಿರುವ ಸಮಸ್ಯೆಗಳ ಬಗ್ಗೆ ಪಂಚಾಯಿತಿ ಸದಸ್ಯÀ ಕೆ.ಪಿ.ಬೋಪಣ್ಣ, ಬಿ.ಎನ್.ಪ್ರಕಾಶ್, ಮುರುಗ, ರಾಮಕೃಷ್ಣ ಸೋಮಣ್ಣ ಹಾಗೂ ಪ್ರಮೋದ್ ಗಣಪತಿ ಗಮನ ಸೆಳೆದರು.
ನಗರ ವಾಸಿಗಳು ತರಕಾರಿ ಖರೀದಿಸಲು ದೂರದ ಪ್ರದೇಶಕ್ಕೆ ತೆರಳಲು ಆಟೋ ಬಾಡಿಗೆಗೆ 80 ರೂ.ನೀಡಬೇಕಾದ ಪರಿಸ್ಥಿತಿ ಎದುರಾಗಿದೆ.ಕಷ್ಟದಲ್ಲಿ ಇರುವ ಜನರು ಮತ್ತೆ ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಂಡು ವ್ಯಾಪಾರ ನಡೆಸಲು ಬಸ್ ನಿಲ್ದಾಣ, ಮಾರುಕಟ್ಟೆ ಬಳಿಯೇ ಸ್ಥಳಾವಕಾಶ ಲಭ್ಯವಿದೆ ಅರ್.ಎಮ್.ಸಿ.ಯಲ್ಲಿರುವ ತರಕಾರಿ ವ್ಯಾಪಾರವನ್ನು ನಾಗರಿಕರ ಅನುಕೂಲಕ್ಕಾಗಿ ಮುಂದಿನ ದಿನದಿಂದಲೇ ಯಥಾಸ್ಥಿತಿ ಕಾಪಾಡಲು ಸಭೆಯು ಒಮ್ಮತದ ನಿರ್ಣಯ ಕೈಗೊಂಡು ಅನುಷ್ಠಾನಕ್ಕಾಗಿ ಠರಾವನ್ನು ಜಿಲ್ಲಾಧಿಕಾರಿಗಳಿಗೆ ಕಳುಹಿಸಲು ತೀರ್ಮಾನ ಕೈಗೊಳ್ಳಲಾಯಿತು.
ಪಂಚಾಯಿತಿ ಸದಸ್ಯ ಸುರೇಶ್ ರೈ ಮಾತನಾಡಿ ದೂರದ ಊರುಗಳಿಂದ ನಗರಕ್ಕೆ ಹೆಚ್ಚಿನ ಪ್ರಮಾಣದಲ್ಲಿ ವ್ಯಾಪಾರಸ್ಥರು ಆಗಮಿಸುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕು ಸ್ಥಳೀಯರೇ ವ್ಯಾಪಾರ ವಹಿವಾಟು ನಡೆಸುವಂತಾಗಬೇಕು. ಇದರಿಂದ ಮುಂದಾಗುವ ಸಮಸ್ಯೆಗಳನ್ನು ತಡೆಯಲು ಸಹಾಯವಾಗಲಿದೆ ಎಂದರು. ಪ್ರತಿಕ್ರಿಯಿಸಿದ ಠಾಣಾಧಿಕಾರಿ ಸುರೇಶ್ ಬೋಪಣ್ಣ ನಗರದಲ್ಲಿ ಟ್ರಾಫಿಕ್ ಕಂಟ್ರೋಲ್ ಮಾಡುವುದು ಪೆÇಲೀಸರ ಕೆಲಸ. ಇದರ ನಿರ್ವಹಣೆಯನ್ನು ಪೆÇಲೀಸರು ಮಾಡಲಿದ್ದಾರೆ. ದೂರದ ಊರುಗಳಿಂದ ವ್ಯಾಪಾರಕ್ಕಾಗಿ ಬರುವವರ ಮೇಲೆ ಪಂಚಾಯಿತಿ ಕ್ರಮಕೈಗೊಳ್ಳಬೇಕು ಎಂದರು. ಸಾಮಾಜಿಕ ಅಂತರ ಕಾಯ್ದುಕೊಂಡು ಕೊರೊನಾ ವೈರಸ್ ಹರಡದಂತೆ ಎಲ್ಲರೂ ಕೈಜೋಡಿಸಬೇಕು ಎಂದು ಬಿ.ಎನ್. ಪ್ರಕಾಶ್ ಗಮನ ಸೆಳೆದರು.
ಸಭೆಯಲ್ಲಿ ಪಿಡಿಒ ಶ್ರೀನಿವಾಸ್, ಪಂಚಾಯಿತಿ ಸದಸ್ಯರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಪಂಚಾಯಿತಿ ಸಿಬ್ಬಂದಿ, ಆರೋಗ್ಯ ಇಲಾಖೆಯ ಅಧಿಕಾರಿಗಳು, ಪೆÇಲೀಸ್ ಸಿಬ್ಬಂದಿ ಸೇರಿದಂತೆ ಪಂಚಾಯಿತಿ ಸದಸ್ಯರು ಇದ್ದರು.