ಮಡಿಕೇರಿ, ಏ. 30: ಸೋಮವಾರಪೇಟೆಯ ಚೌಡ್ಲು ರಸ್ತೆಯಲ್ಲಿ ಅಕ್ರಮವಾಗಿ ಜೂಜಾಡುತ್ತಿದ್ದ 6 ಮಂದಿಯನ್ನು ಬಂಧಿಸಿ ಪೊಲೀಸರು ಕಾನೂನು ಕ್ರಮಕೈಗೊಂಡಿದ್ದಾರೆ. ಅಲ್ಲಿನ ನಿವಾಸಿಗಳಾದ ಸುಮಂತ್, ರಿಯಾಜ್, ಅನಿಲ್‍ಕುಮಾರ್, ದರ್ಶನ್, ಹಸನ್, ಸಂತೋಷ್ ಎಂಬವರ ವಿರುದ್ಧ ಕಾನೂನು ಕ್ರಮ ಜರುಗಿಸಿರುವ ಪೊಲೀಸರು ನಗದು ರೂ. 23 ಸಾವಿರದ ಇನ್ನೂರು ಹಾಗೂ ಇತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಡಿವೈಎಸ್‍ಪಿ ಶೈಲೇಂದ್ರ ಕುಮಾರ್, ವೃತ್ತ ನಿರೀಕ್ಷಕ ನಂಜುಂಡೇಗೌಡ ನಿರ್ದೇಶನ ದೊಂದಿಗೆ ಠಾಣಾಧಿಕಾರಿ ಶಿವಶಂಕರ್ ಸಿಬ್ಬಂದಿಗಳಾದ ಕರಿ ಬಸಪ್ಪ, ಪ್ರವೀಣ್, ರಮೇಶ್, ನವೀನ್, ಶಿವಕುಮಾರ್, ಬಸಪ್ಪ ಹಾಗೂ ಚಾಲಕ ಕುಮಾರ್ ಕಾರ್ಯಾ ಚರಣೆಯಲ್ಲಿ ಪಾಲ್ಗೊಂಡಿದ್ದರು.