ಮಡಿಕೇರಿ, ಏ.30: ಜಿಲ್ಲೆಯಲ್ಲಿ ವಿದೇಶ ಪ್ರವಾಸ ಇತಿಹಾಸ ಇರುವವರನ್ನು ಪತ್ತೆ ಹಚ್ಚಿದ್ದ ಪ್ರಕರಣಗಳ ಪೈಕಿ ಗೃಹ ಸಂಪರ್ಕ ತಡೆಯಲ್ಲಿದ್ದ ಎಲ್ಲರೂ 14 ದಿನಗಳ ಸಂಪರ್ಕ ತಡೆ ಅವಧಿಯನ್ನು ಪೂರೈಸಿರುತ್ತಾರೆ. ಇತರ ಜಿಲ್ಲೆ-ರಾಜ್ಯಗಳಿಂದ ಪಾಸ್‍ಗಳನ್ನು ಪಡೆದು ಜಿಲ್ಲೆಗೆ ಪ್ರವೇಶಿಸಿರುವ ಜನರೂ ಸೇರಿದಂತೆ 14 ದಿನಗಳೊಳಗಿರುವ ಗೃಹ ಸಂಪರ್ಕ ತಡೆಯಲ್ಲಿರುವ ಪ್ರಕರಣಗಳ ವಿವರಗಳು ಕೆಳಕಂಡಂತಿವೆ:

ಜಿಲ್ಲೆಯಲ್ಲಿ ಗೃಹ ಸಂಪರ್ಕ ತಡೆಯಲ್ಲಿರುವ ರಾಜ್ಯದ ಇತರÀÀ ಜಿಲ್ಲೆಗಳ ಜನರು-995. ಜಿಲ್ಲೆಯಲ್ಲಿ ಗೃಹ ಸಂಪರ್ಕ ತಡೆಯಲ್ಲಿರುವ ಇತರ ರಾಜ್ಯದ ಜನರು-17. ಜಿಲ್ಲೆಯಲ್ಲಿ ಗೃಹ ಸಂಪರ್ಕ ತಡೆಯಲ್ಲಿರುವ ಒಟ್ಟು ಜನರು-1012. ಇಲ್ಲಿಯವರೆಗೆ ಒಟ್ಟು 731 ಗಂಟಲು ದ್ರವ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯ ಪರೀಕ್ಷೆಗೆ ಕಳುಹಿಸಲಾಗಿದೆ. ಪಾಸಿಟಿವ್ ಪ್ರಕರಣಗಳು- 01 (ಪ್ರಸ್ತುತ ಗುಣಮುಖರಾಗಿದ್ದಾರೆ).

ನೆಗೆಟಿವ್ ವರದಿ ಬಂದ ಪ್ರಕರಣಗಳು-651. ವರದಿ ನಿರೀಕ್ಷಿತ ಪ್ರಕರಣಗಳು-79.

ಪ್ರಸ್ತುತ ಕೋವಿಡ್ ಆಸ್ಪತ್ರೆಯಲ್ಲಿ 43 ಜನರು ದಾಖಲಿರುತ್ತಾರೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.