ಶನಿವಾರಸಂತೆ, ಏ. 30: ಸಮೀಪದ ಕೊಡ್ಲಿಪೇಟೆಯಲ್ಲಿ ಬಡ ಕಾರ್ಮಿಕರಿಗೆ ಅಲ್ಲಿನ ವಿದ್ಯಾಸಂಸ್ಥೆ, ವಿವಿಧ ಸಂಘ-ಸಂಸ್ಥೆ ಹಾಗೂ ಸಮುದಾಯಗಳ ಸಹಭಾಗಿತ್ವದಲ್ಲಿ ಉಚಿತ ಊಟದ ಪೊಟ್ಟಣಗಳ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸೋಮವಾರ, ಬುಧವಾರ ಹಾಗೂ ಶುಕ್ರವಾರದಂದು ಮಧ್ಯಾಹ್ನ 12 ರಿಂದ 1.30 ರವರೆಗೆ ಪಟ್ಟಣದ ಪದವಿಪೂರ್ವ ಕಾಲೇಜು, ಬಸವೇಶ್ವರ ಕಲ್ಯಾಣ ಮಂಟಪ, ಜಾಮೀಯ ಮಸೀದಿ, ದೊಡ್ಡಕೊಡ್ಲಿ ಗ್ರಾಮದ ಜ್ಞಾನ ಮಂದಿರ ಹಾಗೂ ಹೊಸಮುನ್ಸಿಪಾಲಿಟಿಯ ಗಣಪತಿ ದೇವಸ್ಥಾನದಲ್ಲಿ ಊಟದ ಪೊಟ್ಟಣ ವಿತರಿಸಲಾಗುವುದು. ಕಡ್ಡಾಯವಾಗಿ ಮಾಸ್ಕ್ ಧರಿಸಿಕೊಂಡು ಪರಸ್ಪರ ಅಂತರ ಕಾಯ್ದುಕೊಂಡು ಬಂದು ಸ್ವೀಕರಿಸಬೇಕು ಎಂದು ಪ್ರಮುಖರು ತಿಳಿಸಿದ್ದಾರೆ.