ಮಡಿಕೇರಿ, ಏ. 28: ಜಿಲ್ಲಾಧಿಕಾರಿಗಳು ಹೊರಡಿಸಿರುವ ಆದೇಶದಂತೆ ಮೇ 3ರ ವರೆಗೆ ಸಿಂಗಲ್, ಮಲ್ಟಿ ಬ್ರಾಂಡೆಡ್ ಮಾಲ್, ಶಾಪಿಂಗ್ ಕಾಂಪ್ಲೆಕ್ಸ್, ಥಿಯೇಟರ್, ಮಲ್ಟಿ ಫ್ಲೆಕ್ಸ್, ಜಿಮ್, ಸ್ವಿಮ್ಮಿಂಗ್ ಪೂಲ್, ಕ್ರೀಡೆ, ಕ್ರೀಡಾಕೂಟ, ಸಾರ್ವಜನಿಕ ಸಭೆ-ಸಮಾರಂಭಗಳು, ಸಂತೆ, ಜಾತ್ರೆ ಎಲ್ಲಾ ಧಾರ್ಮಿಕ ಪೂಜಾ ಮಂದಿರಗಳು, ಪ್ರವಾಸಿ ತಾಣಗಳು, ಪ್ರವಾಸಿಗರ ಸಂಚಾರ, ಎಲ್ಲಾ ರೀತಿಯ ಹೊಟೇಲ್ ಕಂ ಲಾಡ್ಜ್‍ಗಳು, ರೆಸಾರ್ಟ್, ಹೋಂಸ್ಟೇ, ಕ್ಲಬ್, ಪಬ್ ಇವುಗಳಿಗೆ ಅವಕಾಶವಿಲ್ಲ.ಸಮಾರಂಭ ಹಾಲ್‍ಗಳು, ಕಲ್ಯಾಣ ಮಂಟಪ, ಚೌಲ್ಟ್ರಿ, ಡಾರ್ಮೆಟರಿ, ಬ್ಯೂಟಿ ಪಾರ್ಲರ್, ಸೆಲೂನ್, ಮದ್ಯ ಮಾರಾಟ ಮಳಿಗೆಗಳು, ಡ್ರೈವಿಂಗ್ ಸ್ಕೂಲ್, ಟ್ರಾವೆಲ್ ಏಜೆನ್ಸಿ, ಸಾರ್ವಜನಿಕ ಲಾಂಡ್ರಿ, ಡ್ರೈವಾಶ್ ಮಳಿಗೆ ಹಾಗೂ ತಂಬಾಕು-ತಂಬಾಕು ಉತ್ಪನ್ನಗಳ ಮಾರಾಟ, ತರಬೇತಿ ಕೇಂದ್ರಗಳು, ಕೋಚಿಂಗ್ ಸೆಂಟರ್, ಆಭರಣ ಮಳಿಗೆಗಳು, ಸಾರ್ವಜನಿಕ ಸಾರಿಗೆ ವ್ಯವಸ್ಥೆಗಳನ್ನು ನಿರ್ಬಂಧಿಸಲಾಗಿದೆ. ಇವು ಹೊರತಾಗಿ ಇತರ ಅಂಗಡಿ ಅವಧಿ ಮೀರಿದ ಪದಾರ್ಥ ಮಾರದಿರಿ ತಡರಾತ್ರಿ ಜಿಲ್ಲಾಧಿಕಾರಿಗಳು ಕಳುಹಿಸಿದ ಮಾಹಿತಿ ಈ ಕೆಳಗಿನಂತಿದೆ ಕೋವಿಡ್ -19 ಹಿನ್ನೆಲೆಯಲ್ಲಿ ಲಾಕ್ ಡೌನ್ ಜಾರಿಗೊಳಿಸಲಾಗಿರುತ್ತದೆ. ಪ್ರಸ್ತುತ ಲಾಕ್ ಡೌನ್ ಅವಧಿ ಜಾರಿಯಲ್ಲಿದ್ದರೂ ಸಹ ಕೊಡಗು ಜಿಲ್ಲೆ ಹಸಿರು ವಲಯ ಎಂದು ಪರಿಗಣಿಸಲ್ಪಟ್ಟಿರುವ ಹಿನ್ನೆಲೆಯಲ್ಲಿ ಸರ್ಕಾರದ ಮಾರ್ಗಸೂಚಿ, ಆದೇಶಗಳ ಅನುಸಾರ ಕೊಡಗು ಜಿಲ್ಲೆಯಲ್ಲಿ ಲಾಕ್ ಡೌನ್ ಅವಧಿಯಲ್ಲಿ ಷರತ್ತುಬದ್ದವಾಗಿ ಕೆಲವು ಅಂಗಡಿ ಮಳಿಗೆಗಳನ್ನು ನಿಗಧಿತ ದಿನ ಮತ್ತು ಸಮಯದಲ್ಲಿ ತೆರೆಯುವ ಬಗ್ಗೆ ಈಗಾಗಲೇ ಅವಕಾಶ ಕಲ್ಪಿಸಲಾಗಿರುತ್ತದೆ.
ಲಾಕ್ ಡೌನ್ ಜಾರಿಯಲ್ಲಿದ್ದರಿಂದ ಹಲವಾರು ಆಹಾರ ಪದಾರ್ಥ ಮಾರಾಟ ಅಂಗಡಿ ಮಳಿಗೆಗಳು ಚಟುವಟಿಕೆಗಳನ್ನು ಸ್ಥಗಿತಗೊಳಿಸಿದ್ದು, ಹಾಲಿ ಷರತ್ತುಬದ್ದ ಅವಕಾಶ ನೀಡಿರುವ ಹಿನ್ನೆಲೆಯಲ್ಲಿ ತೆರೆಯಲಿರುವು ದರಿಂದ ಸಾರ್ವಜನಿಕರ
(ಮೊದಲ ಪುಟದಿಂದ) ಮಳಿಗೆಗಳು ವ್ಯಾಪಾರ ವಹಿವಾಟುಗಳನ್ನು ನಡೆಸಬಹುದಾಗಿದೆ.
ಹೊಟೇಲ್, ರೆಸ್ಟೋರೆಂಟ್, ಬೇಕರಿ, ಜ್ಯೂಸ್ ಅಂಗಡಿ, ಐಸ್‍ಕ್ರಿಂ ಪಾರ್ಲರ್ ಇತ್ಯಾದಿಗಳಲ್ಲಿ ಆಹಾರ ಸೇವನೆಗೆ ಅವಕಾಶವಿಲ್ಲ. ಬದಲಿಗೆ ಸಾಮಾಜಿಕ ಅಂತರ ಕಾಯ್ದುಕೊಂಡು ಪಾರ್ಸಲ್ ಕೊಂಡೊಯ್ಯಬಹುದು ಅಥವಾ ಹೋಂ ಡೆಲಿವರಿ ನೀಡಬಹುದು. ಸೈಬರ್ ಸೆಂಟರ್‍ಗಳಲ್ಲಿ ಕೇವಲ ಪ್ರಿಂಟೌಟ್ ತೆಗೆಯುವುದಿದ್ದರೆ ಮಾತ್ರ ಅವಕಾಶ ನೀಡಲಾಗುತ್ತದೆ.
ಉಳಿದಂತೆ ಶೇ. 50 ಕಾರ್ಮಿಕ, ಸಿಬ್ಬಂದಿ ಬಲ ಮೀರದಂತೆ ವ್ಯಾಪಾರೋದ್ಯಮ ನಡೆಸುವುದು. ನೈರ್ಮಲ್ಯ ಮತ್ತು ಶುಚಿತ್ವ ಕಾಪಾಡುವುದು. ಮಳಿಗೆಗಳಲ್ಲಿ ವರ್ತಕರು, ಕಾರ್ಮಿಕರು ಹ್ಯಾಂಡ್ ಸ್ಯಾನಿಟೈಸರ್, ಗ್ಲವ್ಸ್ ಮತ್ತು ಮುಖಗವಸುಗಳನ್ನು ಕಡ್ಡಾಯವಾಗಿ ಬಳಸುವುದು.
ಸಾರ್ವಜನಿಕರು ಮುಖಗವಸು ಧರಿಸುವುದು ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು. ವಿನಾಃಕಾರಣ ತಿರುಗಾಡುವುದು, ಗುಂಪುಗೂಡುವುದು ಮಾಡತಕ್ಕದ್ದಲ್ಲ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.