ಕಣಿವೆ, ಏ. 28: ಸಾಂಕ್ರಾಮಿಕ ರೋಗಬಾಧೆಯಿಂದ ಜನ ಅನಾರೋಗ್ಯಕ್ಕೆ ತುತ್ತಾಗುತ್ತಿರುವ ಈ ಸಂದರ್ಭದಲ್ಲಿ ಇಲ್ಲಿಗೆ ಸಮೀಪದ ಶಿರಂಗಾಲ ಗ್ರಾಮ ಪಂಚಾಯತಿ ಆಡಳಿತ ಅಲ್ಲಿನ ನಿವಾಸಿಗಳಿಗೆ ಕಲ್ಮಶ ತುಂಬಿ ಹರಿವ ಚರಂಡಿಯ ಒಳಗೆ ಕುಡಿಯುವÀ ನೀರಿನ ಪೈಪ್‍ಲೈನ್ ಅಳವಡಿಸಿದೆ.

ಗ್ರಾಮ ನಿವಾಸಿಗಳು ವಿಧಿಯಿಲ್ಲದೇ ಅದೇ ಚರಂಡಿಯ ಒಳಗೆ ಬಿಂದಿಗೆ ಬಕೆಟ್‍ಗಳನ್ನು ಇಟ್ಟು ನೀರು ತುಂಬಿಸಿ ಮನೆಯೊಳಗೆ ಕೊಂಡೊಯ್ದು ಕುಡಿಯುತ್ತಿದ್ದಾರೆ. ಇದು ಮೂಡಲಕೊಪ್ಪಲು, ಶಿರಂಗಾಲ ಗ್ರಾಮದ ಕೋಟೆ ಜನವಸತಿ ಪ್ರದೇಶದಲ್ಲಿ ಕಂಡು ಬರುವ ಸಾಮಾನ್ಯ ಚಿತ್ರಣವಾಗಿದೆ.

ಈ ಬಗ್ಗೆ ಸ್ಥಳೀಯ ಜನಪ್ರತಿನಿಧಿ ಗಳಿಗೂ ಕೂಡ ಜನರಿಗೆ ಕುಡಿಯುವ ಶುದ್ಧ ನೀರು ಒದಗಿಸುವ ಹೊಣೆಗಾರಿಕೆ ಇಲ್ಲವೇ ಎಂಬುದು ಪ್ರಶ್ನೆ. ಅದು ಇರಲೀ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಏನು ಮಾಡುತ್ತಿದ್ದಾರೆ.

ಅವರಿಗೆ ಈ ಜನರು ಕುಡಿವ ನೀರಿಗೆ ಬವಣೆ ಪಟ್ಟು ಕೊಳಚೆಯ ಜಾಗದೊಳಗೆ ಕುಡಿವ ನೀರು ಸಂಗ್ರಹಿಸುವ ವಿಚಾರವೇ ತಿಳಿದಿಲ್ಲವೇ ಎಂಬುದು ಕೂಡ ಪ್ರಶ್ನೆ. ಗ್ರಾಮದ ಕೂಗಳತೆಯಲ್ಲಿ ಕಾವೇರಿ ನದಿ ಹರಿಯುತ್ತಿದೆ.

ಆದರೂ ಕೂಡ ಈ ಜನರು ಕುಡಿವ ನೀರಿಗೆ ಪರದಾಡುವಂತಾ ಗಿದೆ. ಕೂಡಲೇ ಈಗ ಕುಡಿವ ನೀರಿಗೆ ಉಂಟಾಗಿರುವ ತತ್ವಾರವನ್ನು ಸರಿಪಡಿಸಬೇಕು. ನಿವಾಸಿಗಳಿಗೆ ಚರಂಡಿಯ ಹೊರತಾದ ಸೂಕ್ತ ವಾದ ಸ್ವಚ್ಛವಾದ ಸ್ಥಳದಲ್ಲಿ ಕುಡಿವ ನೀರು ಸಂಗ್ರಹಿಸುವಂತೆ ಮಾಡಬೇಕೆಂದು ಗ್ರಾಮದ ನಿವಾಸಿಗಳಾದ ಅಪ್ಪಾಜಣ್ಣ, ವಸಂತ, ರವಿ, ಮೋಹನ್ ಕುಮಾರ, ಸುಜಮ್ಮ, ಭಾಗ್ಯ, ಸಿದ್ದವ್ವ ಮೊದಲಾದವರು ಆಗ್ರಹಿಸಿದ್ದಾರೆ.