ಕೂಡಿಗೆ, ಏ. 28: ಜಿಲ್ಲೆಯ ಗಡಿಭಾಗ ಶಿರಂಗಾಲದ ರಾಜ್ಯ ಹೆದ್ದಾರಿಯಲ್ಲಿ ಅರಣ್ಯ ಇಲಾಖೆಯ ವತಿಯಿಂದ ನಿರ್ಮಾಣ ಮಾಡಿರುವ ತಪಾಸಣೆ ಕೇಂದ್ರವು ಕಳೆದ ರಾತ್ರಿಯ ಗಾಳಿ-ಮಳೆಗೆ ಕೊಠಡಿಯ ಹಂಚುಗಳು ಹಾರಿ ಹೋಗಿ ಕರ್ತವ್ಯ ನಿರ್ವಹಿಸಲು ಅಧಿಕಾರಿಗಳಿಗೆ ಬಾರಿ ತೊಂದರೆ ಉಂಟಾಗಿದೆ.

ಸ್ಥಳಕ್ಕೆ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ನಂದೀಶ್ ಕುಮಾರ ಭೇಟಿ ನೀಡಿ ಪರಿಶೀಲಿಸಿ ಬದಲಿ ವ್ಯವಸ್ಥೆಗೆ ಮುಂದಾಗಿದ್ದಾರೆ.