ಮಡಿಕೇರಿ, ಏ. 28: ಜೂಜು ಅಡ್ಡೆಯ ಮೇಲೆ ದಾಳಿ ನಡೆಸಿದ ಕುಶಾಲನಗರ ಪೊಲೀಸರು 6 ಜನರನ್ನು ವಶಕ್ಕೆ ಪಡೆದಿದ್ದಾರೆ. ತಾ. 27ರಂದು ಖಚಿತ ವರ್ತಮಾನ ಆಧಾರದ ಮೇರೆ ಕುಶಾಲನಗರ ವೃತ್ತ ನಿರೀಕ್ಷಕ ಎಂ.ಮಹೇಶ್ ಹಾಗೂ ಸಿಬ್ಬಂದಿ ಕುಶಾಲನಗರ ಗ್ರಾಮಾಂತರ ಠಾಣಾ ಸರಹದ್ದಿನ ಸುಂದರನಗರ ಗ್ರಾಮದಲ್ಲಿರುವ ಅಗ್ನಿಶಾಮಕ ಠಾಣೆಯ ಹಿಂಭಾಗದ ಕಾಫಿ ಗೋಡೌನ್ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ನಡೆಯುತ್ತಿದ್ದ ಜೂಜು ಅಡ್ಡೆ ಮೇಲೆ ದಾಳಿ ಮಾಡಿ 6 ಜನರನ್ನು ಬಂಧಿಸಿ ಅವರಿಂದ 12,830 ರೂ. ಗಳನ್ನು ಹಾಗೂ ಜೂಟಾಟಕ್ಕೆ ಬಳಸಿದ ಇತರೆ ಸಾಮಗ್ರಿಗಳನ್ನು ವಶಕ್ಕೆ ಪಡೆದು ಕಾನೂನು ಕ್ರಮ ಜರುಗಿಸಿದ್ದಾರೆ.