ಕೂಡಿಗೆ, ಏ. 27: ಮೈಸೂರು ಜಿಲ್ಲೆಯ ರಾಣಿಗೇಟ್ ಗ್ರಾಮದಲ್ಲಿ ಕಾರ್ಯನಿರ್ವಹಿಸುತ್ತಿದ್ದ ವಲಸೆ ಕಾರ್ಮಿಕರು ಪೆÇಲೀಸರ ಕಣ್ತಪ್ಪಿಸಿ ಕಾವೇರಿ ನದಿ ದಾಟಿ ಬಂದ ಘಟನೆ ಸೋಮವಾರ ನಡೆದಿದೆ.

ವಿದ್ಯುತ್ ಕಂಬ ನಿರ್ಮಾಣ ಕೆಲಸ ಮಾಡುವ ಇವರು, ಮೈಸೂರು ಜಿಲ್ಲೆಯ ದೊಡ್ಡಸೂರು ರಾಣಿಗೇಟ್ ಗ್ರಾಮದಲ್ಲಿ ಕೆಲಸ ಮಾಡುತ್ತಿದ್ದರು. ಊರಿನಿಂದ ಕರೆ ಬಂದಿದೆ ಎಂದು ಕಾವೇರಿ ನದಿ ದಾಟಿ ಕುಶಾಲನಗರಕ್ಕೆ ಆಗಮಿಸಿದ್ದಾರೆ. ಆನಂತರ ಕಾಲ್ನಡಿಗೆಯ ಮೂಲಕ ಗಂಗಾವತಿ ಸಮೀಪದ ಕೊಪ್ಪಳಕ್ಕೆ ತೆರಳುತ್ತಿದ್ದ 7 ಮಕ್ಕಳನ್ನೊಳಗೊಂಡ 10 ಜನ ಕಾರ್ಮಿಕರನ್ನು ಸ್ಥಳೀಯ ಪತ್ರಕರ್ತ ರಾದ ಕೆ.ಕೆ.ನಾಗರಾಜ್ ಶೆಟ್ಟಿ ಹಾಗೂ ಕೆ.ಬಿ. ಷಂಶುದ್ಧೀನ್, ಗಣೇಶ ಅವರು ವಿಚಾರಣೆ ನಡೆಸಿದ ವೇಳೆ ವಿಚಾರ ತಿಳಿದುಬಂದಿದೆ. ಆನಂತರ ಸಂಬಂಧಪಟ್ಟ ಕೂಡಿಗೆ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಗಮನಕ್ಕೆ ತರಲಾಗಿದೆ.

ವಲಸೆ ಕಾರ್ಮಿಕರು ಕಳೆದ 4 ತಿಂಗಳುಗಳಿಂದ ಮಂಗಳೂರಿನ ಗುತ್ತಿಗೆದಾರರ ಬಳಿ ಕಾರ್ಯನಿರ್ವಹಿಸುತ್ತಿದ್ದು, ತಮ್ಮ ಕುಟುಂಬಸ್ಥರೋರ್ವರು ಕ್ಯಾನ್ಸರ್ ರೋಗದಿಂದ ಬಳಲುತ್ತಿರುವ ಹಿನ್ನೆಲೆ ಕಾಲ್ನಡಿಗೆಯ ಮೂಲಕ ವಲಸೆ ಹೊರಟಿದ್ದಾರೆ ಎಂದು ಮಾಹಿತಿ ತಿಳಿದುಬಂದಿತು

ಈ ಸಂಬಂಧಿಸಿದ ಗುತ್ತಿಗೆದಾರರೊಂದಿಗೆ ದೂರವಾಣಿ ಮೂಲಕ ಮಾತಾನಾಡಿದ ಕೂಡಿಗೆ ಗ್ರಾ.ಪಂ. ಅಧಿಕಾರಿ, ಅಶ್ವಿನಿ ಅವರು ವಲಸೆ ಕಾರ್ಮಿಕರನ್ನು ಅವರ ಊರಿಗೆ ಕಳುಹಿಸಲು ಅನುಮತಿ ಪತ್ರವನ್ನು ಪಡೆದು ಕಳುಹಿಸಿಕೊಡುತ್ತೇವೆ ಎಂದು ತಿಳಿಸಿದ್ದಾರೆ.