ಮಡಿಕೇರಿ, ಏ. 27: ಮೀನುಕೊಲ್ಲಿ ಅರಣ್ಯದಿಂದ ಕಾಫಿ ಬೋರ್ಡ್ ತೋಟಕ್ಕೆ ದಾಟಲು ಪ್ರಯತ್ನಿಸುತ್ತಿದ್ದ ಹೆಬ್ಬಾವನ್ನು ಅರಣ್ಯ ಇಲಾಖೆ ಸಿಬ್ಬಂದಿ ವೀಕ್ಷಿಸಿ, ಉರಗ ತಜ್ಞ ರವಿಚಂದ್ರ ಆಚಾರ್ಯ ಅವರಿಗೆ ತಿಳಿಸಿದ ಮೇರೆಗೆ ಅವರು ಸ್ಥಳಕ್ಕೆ ಆಗಮಿಸಿ ಹಾವನ್ನು ಹಿಡಿದು ಮೀನುಕೊಲ್ಲಿ ಅರಣ್ಯಕ್ಕೆ ಬಿಟ್ಟರು. ಸುಮಾರು ಹತ್ತು ಅಡಿ ಉದ್ದ, 20 ಕೆಜಿ ತೂಕದ ಹಾವನ್ನು ರಕ್ಷಣೆ ಮಾಡಿದರು.

ಕಳೆದರಾತ್ರಿ ಸಿಬ್ಬಂದಿಗಳು ಗಸ್ತು ತಿರುಗುತ್ತಿದ್ದ ಸಂದರ್ಭ ಹಾವು ರಸ್ತೆ ದಾಟುತ್ತಿರುವುದನ್ನು ನೋಡಿದ ಸಿಬ್ಬಂದಿ ತೋಟಕ್ಕೆ ಹೋಗುವ ಹಾವನ್ನು ಅರಣ್ಯಕ್ಕೆ ಓಡಿಸುವ ಪ್ರಯತ್ನ ಮಾಡಿದರು.

ಆದರೆ ಹಾವು ಹುಲ್ಲಿನ ಪೆÇದೆಯಲ್ಲಿ ನುಗ್ಗಿ ರಸ್ತೆ ಬದಿಯಲ್ಲೇ ಸುತ್ತಿ ಕೊಂಡು ಮಲಗಿತ್ತು. ಮರುದಿನ ಬೆಳಿಗ್ಗೆ 10 ಗಂಟೆಗೆ ನೋಡುವಾಗ ಹಾವು ಅದೇ ಜಾಗದಲ್ಲಿ ಗೋಚರಿಸಿದೆ. ಅರಣ್ಯ ಅಧಿಕಾರಿ ಸುಬ್ರಾಯ, ಸಿಬ್ಬಂದಿಗಳಾದ ರವಿ, ವಿಜಯ್, ದುರ್ಗೇಶ್, ಆಶಿಕ್ ಗೌಡ, ತಿಲಕ್ ಮತ್ತಿತರರು ಇದ್ದರು.