ಜನುಮ ದಿನ

ಇಂದು ಹಿರಿಯ ಧರ್ಮಗುರು ತತ್ವಶಾಸ್ತ್ರಜ್ಞ ಶ್ರೀ ಶಂಕರಾಚಾರ್ಯರ ಜಯಂತಿ. ಕ್ರಿ.ಶ. 780ರಲ್ಲಿ ಶಿವಗುರು-ಸತಿದೇವಿ ದಂಪತಿಗಳ ಪುತ್ರನಾಗಿ ಕೇರಳದ ಕಾಲಟಿ ಗ್ರಾಮದಲ್ಲಿ ಜನಿಸಿ ದರು. ಗೋವಿಂದ ಭಗವತ್ಪಾದರ ಶಿಷ್ಯರಾಗಿ ಶಾಸ್ತ್ರ ಗ್ರಂಥಗಳನ್ನು ಅಧ್ಯಯನ ಮಾಡಿದ ಶಂಕರಾಚಾರ್ಯರು, ಕಾಶಿಯಲ್ಲಿ ವಿದ್ವಾಂಸರ ಜೊತೆಗೂಡಿ ಅದ್ವೆತ ಮಾರ್ಗದ ಕುರಿತು ವಾದಿಸಿ ಜಯಿಸಿದರು.

ಸನ್ಯಾಸಿಯಾಗಿ ಜೀವಿಸಿದರೂ ತಾಯಿಯ ಆರೋಗ್ಯ ಕೆಟ್ಟಾಗ ಆರೈಕೆ ಮಾಡಿದ ಶಂಕರಾಚಾರ್ಯರು ಉಪನಿಷತ್‍ಗಳಲ್ಲಿ ಧರ್ಮದ ಉಪದೇಶ ಹಾಗೂ ತತ್ವಶಾಸ್ತ್ರವಿದೆ ಎಂದರಲ್ಲದೆ, ಗೀತೆ ಹಾಗೂ ಬ್ರಹ್ಮಸೂತ್ರಗಳಿಗೆ ವಿದ್ವತ್ ಪೂರ್ಣವಾದ ಭಾಷ್ಯಗಳನ್ನು ಬರೆದರು. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೂ ಸಂಚರಿಸಿದ ಈ ಧರ್ಮದರ್ಶಿಗಳು ಭಾರತೀಯರು ಪೂಜಿಸುವ ಹಲವು ದೇವರುಗಳ ಕುರಿತು ಸಂಸ್ಕøತದಲ್ಲಿ ಸೊಗಸಾದ ಸ್ತೋತ್ರಗಳನ್ನು ರಚಿಸಿದರು. ಸನ್ಯಾಸಿ ಸಂಘಮಠಗಳನ್ನೂ ಸ್ಥಾಪಿಸಿದರು. ಪ್ರಯಾಗದಲ್ಲಿ ಪ್ರತಿ ಹನ್ನೊಂದು ವರ್ಷಗಳಿಗೊಮ್ಮೆ ನಡೆಯುವ ಕುಂಭಮೇಳವನ್ನು ಸ್ಥಾಪಿಸಿದವರು ಶ್ರೀಶಂಕರಾಚಾರ್ಯರು.

ಕರ್ನಾಟಕದ ಶೃಂಗೇರಿಯಲ್ಲಿ ಶ್ರೀ ಶಾರದಾ ದೇವಾಲಯ ನಿರ್ಮಿಸಿ ದರಲ್ಲದೆ, ಭಾರತದ ವಿವಿಧೆಡೆಗಳಲ್ಲಿ ಏಳು ಮಠಗಳನ್ನು ಸ್ಥಾಪಿಸಿದರು. ತಮ್ಮ ಜೀವಿತಾವಧಿಯ 32 ವರ್ಷಗಳ ಅವಧಿಯಲ್ಲಿ ಅಧ್ಯಾತ್ಮವಲಯದಲ್ಲಿ ಅಪಾರ ಸಾಧನೆಯನ್ನೇ ಮಾಡಿದ್ದಾರೆ. ವೈಶಾಖ ಶುದ್ಧ ಪಂಚಮಿ ದಿನದಂದು ಈ ಪುಣ್ಯ ಪುರುಷರ ಜಯಂತಿ ಯನ್ನು ಭಾರತದಾದ್ಯಂತ ಆಚರಿಸಲಾಗುತ್ತದೆ. ?ಹರೀಶ್‍ಸರಳಾಯ,

ಮಡಿಕೇರಿ.