ಇತರ ಮೂವರ ವಿರುದ್ಧ ಕ್ರಮ

ಸಿದ್ದಾಪುರ, ಏ. 27: ಅಪ್ರಾಪ್ತೆಯೊಬ್ಬಳನ್ನು ಎಳೆದಾಡಿ ಮಾನಭಂಗಕ್ಕೆ ಯತ್ನಿಸಿರುವ ಯುವಕನೊಬ್ಬನನ್ನು ಸಿದ್ದಾಪುರ ಪೊಲೀಸರು ಬಂಧಿಸಿ, ಪೋಕ್ಸೋ ಕಾಯ್ದೆಯಡಿ ಕ್ರಮಕೈಗೊಂಡಿದ್ದಾರೆ.

ನೆಲ್ಲಿಹುದಿಕೇರಿಯ ದೀಪಕ್ (25) ಬಂಧಿತ ಆರೋಪಿ, ಈ ಪ್ರಕರಣದಲ್ಲಿ ಆತನಿಗೆ ಥಳಿಸಿರುವ ಕಾರಣಕ್ಕಾಗಿ ಅಲ್ಲಿನ ನಿವಾಸಿಗಳಾದ ಬೆಟ್ಟದ ಕಾಡುವಿನ ಬಷೀರ್, ನಜೀಬ್, ಜಾಬೀರ್ ಎಂಬವರ ವಿರುದ್ಧವೂ ಮೊಕದ್ದಮೆ ದಾಖಲಿಸಿಕೊಂಡಿರುವ ಪೊಲೀಸರು, ಎಲ್ಲ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಅಲ್ಲದೆ ನ್ಯಾಯಾಧೀಶರ ಮುಂದೆ ಹಾಜರುಪಡಿಸುವುದರೊಂದಿಗೆ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.