ಕುಶಾಲನಗರ, ಏ. 25: ರಾಷ್ಟ್ರೀಯ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರು ಕುಶಾಲನಗರದಲ್ಲಿ ರಕ್ತದಾನ ಕಾರ್ಯಕ್ರಮ ಹಮ್ಮಿಕೊಂಡರು. ಕುಶಾಲನಗರ ಸರಕಾರಿ ಆರೋಗ್ಯ ಸಮುದಾಯ ಕೇಂದ್ರದಲ್ಲಿ ನಡೆದ ಕಾರ್ಯಕ್ರಮಕ್ಕೆ ಇಂಟೆಕ್ ರಾಜ್ಯಾಧ್ಯಕ್ಷ ನಾಪಂಡ ಮುತ್ತಪ್ಪ ಅವರು ಚಾಲನೆ ನೀಡಿದರು. ಮಡಿಕೇರಿ ಜಿಲ್ಲಾಸ್ಪತ್ರೆ ಸಹಯೋಗದೊಂದಿಗೆ ನಡೆದ ಶಿಬಿರವನ್ನು ಡಾ.ಕರುಂಬಯ್ಯ ಮತ್ತು ಸ್ಥಳೀಯ ವೈದ್ಯಾಧಿಕಾರಿ ಡಾ,ಮಧುಸೂದನ್ ಅವರು ನಡೆಸಿಕೊಟ್ಟರು.
ಸುಮಾರು 30 ಕ್ಕೂ ಅಧಿಕ ವಿದ್ಯಾರ್ಥಿಗಳು ಶಿಬಿರದಲ್ಲಿ ಪಾಲ್ಗೊಂಡರು.
ಅಲ್ಪಸಂಖ್ಯಾತರ ಜಿಲ್ಲಾ ಘಟಕದ ಅಧ್ಯಕ್ಷ ಉಸ್ಮಾನ್, ಎನ್ಎಸ್ಯುನ ಪ್ರಮುಖರಾದ ತ್ರಿನೇಶ್, ಅಬ್ದುಲ್ ಅತೀಶ್, ಹೇಮಂತ್, ರಾಸಿಕ್ ಮತ್ತಿತರರು ಇದ್ದರು.