ಸುಂಟಿಕೊಪ್ಪ,ಏ.25: ಕೊರೊನಾ ಲಾಕ್‍ಡೌನ್ ಹಿನ್ನಲೆ ಶಾಂತಿ ಸೌಹಾರ್ದತೆಯ ರಂಜಾನ್ ಹಬ್ಬವನ್ನು ಮುಸ್ಲಿಮರು ಮನೆಯಲ್ಲಿ ಆಚರಿಸಬೇಕು. ಯಾವುದೇ ರೀತಿಯ ಸುಳ್ಳು ಸುದ್ದಿಗಳಿಗೆ ಗಮನ ಹರಿಸಬಾರದು, ಶಾಂತಿ ಸೌಹಾರ್ದತೆಗೆ ಧಕ್ಕೆ ಬಾರದಂತೆ ಮನೆಗಳಲ್ಲಿಯೇ ಪ್ರಾರ್ಥಿಸುವ ಮೂಲಕ ಕೊರೊನಾ ಸೋಂಕಿನಿಂದ ಪಾರಾಗೋಣವೆಂದು ಸುಂಟಿಕೊಪ್ಪ ಠಾಣಾಧಿಕಾರಿ ತಿಮ್ಮಪ್ಪ ಕರೆ ನೀಡಿದರು.

ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ರಂಜಾನ್ ಹಬ್ಬದ ಹಿನ್ನೆಲೆ ವಿವಿಧ ಧರ್ಮಗಳ ಮುಖಂಡರ ಸಂಮ್ಮುಖದಲ್ಲಿ ಸೌಹಾರ್ದ ಸಭೆಯನ್ನು ಆಯೋಜಿಸಲಾಗಿತ್ತು.

ಠಾಣಾಧಿಕಾರಿ ತಿಮ್ಮಪ್ಪ ಮಾತನಾಡಿ ಮುಸ್ಲಿಮರು ರಂಜಾನ್ ಹಬ್ಬದಂದು ಮಸೀದಿಗಳಿಗೆ ತೆರಳದೆ ಮನೆಯಲ್ಲಿಯೇ ಪ್ರಾರ್ಥನೆ ಸಲ್ಲಿಸಿ ತಮ್ಮ ಆರೋಗ್ಯ ಕಾಪಾಡಿಕೊಳ್ಳುವಂತೆ ಕರೆ ನೀಡಿದರು. ರಂಜಾನ್ ಇಫ್ತ್ಯಾರ್ ಕೂಟ ನಡೆಸದಂತೆ ಮಸೀದಿಯಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡದಂತೆ ಸೂಚಿಸಿದರು. ಸಂವಿಧಾನದ ಹಕ್ಕು ಮತ್ತು ಕರ್ತವ್ಯವನ್ನು ಎಲ್ಲಾ ಧರ್ಮದವರು ಪಾಲಿಸಬೇಕು. ಕಾನೂನಿಗೆ ವಿರುದ್ಧವಾಗಿ ಯಾರೇ ನಡೆದರೂ ನಿರ್ದಾಕ್ಷಿಣ್ಯವಾಗಿ ಅಂತಹವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದರು. ಸುಂಟಿಕೊಪ್ಪದಲ್ಲಿ ಎಲ್ಲಾ ಧರ್ಮಿಯರು ನೆಲೆಸಿದ್ದಾರೆ. ಈ ಸಂದರ್ಭ ವಿವಿಧ ಮಸೀದಿಗಳಿಂದ ಮುಖಂಡರುಗಳು, ಸಾರ್ವಜನಿಕರು ಹಾಜರಿದ್ದರು.