ಶನಿವಾರಸಂತೆ, ಏ. 25; ಸಮೀಪದ ಕೊಡ್ಲಿಪೇಟೆಯಲ್ಲಿ ಕೊಡ್ಲಿಪೇಟೆ ವಿದ್ಯಾಸಂಸ್ಥೆ ಹಾಗೂ ಪೊಲೀಸ್ ಇಲಾಖೆ ಸಹಭಾಗಿತ್ವದಲ್ಲಿ ಕೊರೊನಾ ವೈರಸ್ ಕುರಿತು ಕರಪತ್ರ, ಮಾಸ್ಕ್ ವಿತರಿಸಿ, ಧ್ವನಿವರ್ಧಕದ ಮೂಲಕ ಕೊರೊನಾ ಗೀತೆಯನ್ನು ಹಾಡುವ ಮೂಲಕ ಜನ ಜಾಗೃತಿ ಮೂಡಿಸಲಾಯಿತು. ವಿದ್ಯಾಸಂಸ್ಥೆ ಅಧ್ಯಕ್ಷ ಹಿರಿಯ ವಕೀಲ ಎಚ್.ಎಸ್. ಚಂದ್ರಮೌಳಿ ನೀಡಿರುವ ಮಾಸ್ಕ್‍ಗಳನ್ನು ಸಂಸ್ಥೆಯಿಂದ ಆರಂಭಿಸಿ, ಹ್ಯಾಂಡ್‍ಪೋಸ್ಟ್ ಜಂಕ್ಷನ್, ದೊಡ್ಡಕುಂದಾ, ಕೆರಗನಹಳ್ಳಿ ಕಡೇಪೇಟೆ ಮತ್ತಿತರ ಮುಖ್ಯಬೀದಿಗಳಲ್ಲಿ ಹಾಗೂ ಬಸ್ ನಿಲ್ದಾಣದಲ್ಲಿ ಸಾರ್ವಜನಿಕರಿಗೆ ವಿತರಿಸಿ, ಅಂತರ ಕಾಪಾಡುವಂತೆ ಸೂಚಿಸಲಾಯಿತು. ಸಂಸ್ಥೆ ಗೌರವಾಧ್ಯಕ್ಷ ಎಸ್.ಎಸ್. ನಾಗರಾಜ್, ಪದಾಧಿಕಾರಿಗಳಾದ ಡಾ. ಉದಯಕುಮಾರ್, ಪರಮೇಶ್, ಯತೀಶ್, ಉಪತಹಶೀಲ್ದಾರ್ ಪುರುಷೋತ್ತಮ್, ಪೊಲೀಸ್ ಉಪಠಾಣೆ ಎಸ್.ಐ. ಶ್ರೀನಿವಾಸ್, ಹೆಡ್‍ಕಾನ್ಸ್‍ಟೇಬಲ್ ಡಿಂಪಲ್, ಸಮಾಜ ಸೇವಕ ಬ್ಯಾಡಗೊಟ್ಟ ಹನೀಫ್, ಪ್ರಾಂಶುಪಾಲ ನಿರಂಜನ್, ಉಪನ್ಯಾಸಕ ಜಗದೀಶ್ ಬಾಬು, ಮುಖ್ಯ ಶಿಕ್ಷಕ ಅಬ್ದುಲ್ ರಬ್, ಶಿಕ್ಷಕರಾದ ಅಭಿಲಾಷ್, ಮಂಜುನಾಥ್, ಸಿಬ್ಬಂದಿ ಶಾಂತಕುಮಾರ್, ಮಂಜೇಗೌಡ ಹಾಜರಿದ್ದರು.