ಗೋಣಿಕೊಪ್ಪಲು, ಏ. 25 : ಕಾಡಾನೆ ದಾಳಿ ನಡೆಸಿದ ಪರಿಣಾಮ ಬೆಳೆದು ನಿಂತಿದ್ದ ಬಾಳೆ ಬೆಳೆ ನಾಶವಾಗಿವೆ. ಗೋಣಿಕೊಪ್ಪ ಸಮೀಪದ ಹರಿಶ್ಚಂದ್ರ ಪುರದ ನಿವಾಸಿ ಕೆ.ವೈ.ರಾಜೀತ್ ಎಂಬವರ ಬಾಳೆ ತೋಟಕ್ಕೆ ಲಗ್ಗೆ ಇಟ್ಟ ಕಾಡಾನೆ ಇನ್ನೇನು ಕೆಲವೆ ದಿನಗಳಲ್ಲಿ ಕಟಾವುಗೆ ಬರಬಹುದಾಗಿದ್ದ ಬಾಳೆಗಿಡಗಳನ್ನು ತಿಂದು ನಷ್ಟ ಪಡಿಸಿವೆ.

ಮೈಸೂರು, ಗೋಣಿಕೊಪ್ಪ ಮುಖ್ಯ ರಸ್ತೆಯ ಸಮೀಪದಲ್ಲೇ ಇರುವ ರೈತರ ತೋಟಗಳಿಗೆ ಕಾಡಾನೆ ಆಗಿಂದಾಗ್ಗೆ ದಾಳಿ ನಡೆಸುತ್ತಿದ್ದು ರೈತನ ನಿದ್ದೆ ಕೆÉಡಿಸಿದೆ. ಮುಂಜಾನೆ ಸಮಯದಲ್ಲಿ ಆಗಮಿಸುವ ಕಾಡಾನೆಗಳು ತೋಟದಲ್ಲಿ ಇರುವ ಬಾಳೆ, ಅಡಿಕೆ ಹಾಗೂ ಕಾಫಿ ಗಿಡಗಳನ್ನು ನಾಶ ಮಾಡಿ ತೆರಳುತ್ತಿವೆ. ಈ ಭಾಗದಲ್ಲಿರುವ ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟುವ ಕೆಲಸ ಇಲಾಖೆಯ ವತಿಯಿಂದ ನಡೆಯಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

- ಹೆಚ್.ಕೆ.ಜಗದೀಶ್