ಸೋಮವಾರಪೇಟೆ, ಏ.25: ಊರಿಗೆಲ್ಲಾ ಬೆಳಕು ನೀಡುವ ಸೆಸ್ಕ್ ಇಲಾಖೆ ದಿನದ 24 ಗಂಟೆ ಕೆಲಸ ಮಾಡುತ್ತಿದ್ದರೂ ಅಲ್ಲಿನ ಸಿಬ್ಬಂದಿಗಳ ಸಮಸ್ಯೆಯನ್ನು ಗಮನಿಸುವತ್ತ ಯಾರೂ ಮುಂದಾಗಿಲ್ಲ.

ಕೋವಿಡ್ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲಾ ಇಲಾಖೆಗಳೂ ಸಮರೋಪಾದಿ ಕಾರ್ಯ ನಿರ್ವಹಿಸುತ್ತಿದ್ದು, ಎಲ್ಲರಿಗೂ ವಿದ್ಯುತ್ ಒದಗಿಸುವ ಲೈನ್ ಮೆನ್ ಗಳು ಮಾತ್ರ ಕನಿಷ್ಟÀ್ಟ ಸೌಕರ್ಯಗಳ ಕೊರತೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.

ಸರಕಾರಿ ಆಸ್ಪತ್ರೆ ಸೇರಿದಂತೆ ಇತರ ಇಲಾಖೆಗಳು, ಸಾರ್ವಜನಿಕರಿಗೆ ಕುಡಿಯುವ ನೀರು ಒದಗಿಸಲು, ಕಾಲಕಾಲಕ್ಕೆ ಸರಿಯಾಗಿ ಮೊಬೈಲ್ ಚಾರ್ಜ್ ಮಾಡಲೂ ಸಹ ವಿದ್ಯುತ್ ಬೇಕೇ ಬೇಕು.

ಆದರೆ ನಿರಂತರ ಕೆಲಸ ಮಾಡುತ್ತಿರುವ ವಿದ್ಯುತ್ ಇಲಾಖೆಯ ಸಿಬ್ಬಂದಿಗಳು ಹಾಗೂ ಮಾರ್ಗದಾಳು ಗಳಿಗೆ Pನಿಷ್ಟ ಸ್ಯಾನಿಟೈಸರ್ ಮತ್ತು ಮಾಸ್ಕ್ ನೀಡಲು ಯಾರೂ ಮುಂದಾಗಿಲ್ಲ.

ಜಿಲ್ಲೆಯಲ್ಲಿ ಪ್ರಕೃತಿ ವಿಕೋಪ ನಡೆದ ಸಂದರ್ಭದಲ್ಲೂ ಹಗಲಿರುಳೆನ್ನದೇ ಸೆಸ್ಕ್ ಇಲಾಖೆ ಶ್ರಮಿಸಿದೆ. ಕೊರೊನಾ ವೈರಸ್ ಸಂಕಷ್ಟದ ಸಮಯದಲ್ಲೂ ಸಹ ಬಿಡುವಿಲ್ಲದ ಕಾರ್ಯದಲ್ಲಿ ಮಾರ್ಗದಾಳುಗಳು ಶ್ರಮಿಸುತ್ತಿದ್ದಾರೆ. ಆದರೆ ಇಂತಹ ಶ್ರಮಜೀವಿಗಳಿಗೆ ಕನಿಷ್ಟ ಸೌಲಭ್ಯಗಳನ್ನು ಕಲ್ಪಿಸದಿರುವದು ವಿಪರ್ಯಾಸ.