ವೀರಾಜಪೇಟೆ, ಏ. 25: ಕೊಡಗಿನಲ್ಲಿ ನಡೆಯುತ್ತಿರುವ ಗೋವುಗಳ ಹತ್ಯೆ ಮತ್ತು ಕಳ್ಳತನವನ್ನು ತಡೆಗಟ್ಟಲು ಇಲಾಖೆಯು ಕಟ್ಟುನಿಟ್ಟಿನ ಕ್ರಮ ಜರುಗಿಸುವಂತೆ ತಾಲೂಕು ಭಜರಂಗದಳದ ಸಂಚಾಲಕ ವಿವೇಕ್ ರೈ ಆಗ್ರಹಿಸಿದ್ದಾರೆ.

ತಾಲೂಕು ಭಜರಂಗದಳದ ಸಂಚಾಲಕ ವಿವೇಕ್ ರೈ ಮಾತನಾಡಿ, ದೇಶವೇ ಪ್ರಸ್ತುತ ದಿನಗಳಲ್ಲಿ ಕೊರೊನಾ ಸೋಂಕು ಹರಡದಂತೆ ತಡೆಯಲು ಲಾಕ್‍ಡೌನ್ ಆದೇಶವನ್ನು ಪಾಲಿಸುತ್ತಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಕೆಲವು ಸಮಾಜ ಘಾತುಕರು ಗೋಮಾತೆಯನ್ನು ಮಾಂಸ ಭಕ್ಷ್ಯ ಮಾಡಲು ಗೋವುಗಳನ್ನು ಕಳ್ಳತನ, ಹತ್ಯೆ ಮಾಡುತ್ತಿರುವುದು ನಿರಂತರವಾಗಿ ನಡೆಯುತ್ತಿವೆ. ಮಾಂಸ ಮಾಡುವ ಉದ್ದೇಶದಿಂದ ಗೋವುಗಳನ್ನು ಹತ್ಯೆ ಮಾಡುವುದನ್ನು ಭಜರಂಗದಳವು ಖಂಡಿಸುತ್ತದೆ.

ಕೊಡಗಿನ ಗೋವು ರಕ್ಷಕರು ತಮ್ಮ ಸಮೀಪದಲ್ಲಿರುವ ಗೋವುಗಳ ಪಾಲಕರುಗಳಿಗೆ ಎಚ್ಚರಿಸಿ ಗೋವುಗಳ ಉಳಿವಿಗಾಗಿ ಹೋರಾಟ ನಡೆಸಿ ನಿರಂತರವಾಗಿ ನಡೆಯುತ್ತಿರುವ ಗೋಹತ್ಯೆ, ಅಕ್ರಮ ಸಾಗಾಟ ಮಾಡುವವರ ವಿರುದ್ಧ ಸಂಬಂಧಿಸಿದ ಇಲಾಖೆ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಬೇಕು. ಅಲ್ಲದೆ ಅಕ್ರಮ ಎಸಗುವವರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ತಾಲೂಕು ಭಜರಂಗದಳ ಆಗ್ರಹಿಸಿದೆ.

- ಕೆ.ಕೆ.ಎಸ್. ವೀರಾಜಪೇಟೆ.