ಮಡಿಕೇರಿ, ಏ. 25: ಕೋವಿಡ್-19 ಕೊರೊನಾ ರೋಗಾಣುವಿನಿಂದ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಕಲಾವಿದರು/ ಸಾಹಿತಿಗಳ ಆರ್ಥಿಕ ಸಹಾಯಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.

ಕಲಾವಿದರು/ಸಾಹಿತಿಗಳು 10 ವರ್ಷ ಕಲಾ ಸೇವೆಯಲ್ಲಿರಬೇಕು, ವೃತ್ತಿನಿರತ ಕಲಾವಿದರಾಗಿದ್ದು, ಆರ್ಥಿಕವಾಗಿ ಸಂಕಷ್ಟದಲ್ಲಿರಬೇಕು. ಕನ್ನಡ ಮತ್ತು ಸಂಸ್ಕøತಿ ಇಲಾಖೆಯಿಂದ ಮಾಸಾಶನ ಪಡೆಯುತ್ತಿರುವವರು ಅರ್ಹರಲ್ಲ, ಸರ್ಕಾರಿ ನೌಕರರಾಗಿರಬಾರದು, ಕಲಾವಿದರು/ ಸಾಹಿತಿಗಳ ಹೆಸರು, ವಿಳಾಸ, ಆಧಾರ್ ಸಂಖ್ಯೆ ಮತ್ತು ವಿವರ ಸಲ್ಲಿಸಬೇಕು. ಅರ್ಜಿಯನ್ನು ತಾ. 29 ರೊಳಗೆ

ಇ-ಮೇಲ್ ವಿಳಾಸ ಞಚಿಟಿbhಚಿvbಟಡಿ@gmಚಿiಟ.ಛಿomಗೆ ಸಲ್ಲಿಸಬೇಕು ಎಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ನಿರ್ದೇಶಕ ರಂಗಪ್ಪ ಕೋರಿದ್ದಾರೆ.