ಗೋಣಿಕೊಪ್ಪಲು, ಏ. 24: ಕರ್ನಾಟಕ ಪ್ರಾಂತ್ಯ ರೈತ ಮತ್ತು ಕಾರ್ಮಿಕ ರಕ್ಷಣಾ ವೇದಿಕೆ ಹಾಗೂ ಕರ್ನಾಟಕ ಮಾನವ ಹಕ್ಕು ಸಮಿತಿ ಕೊಡಗು ಜಿಲ್ಲಾ ಮಹಿಳಾ ಘಟಕದ ವತಿಯಿಂದ ದಕ್ಷಿಣ ಕೊಡಗಿನ ವಿವಿಧ ಹಾಡಿಗಳು, ಕಾಲೋನಿಗಳಿಗೆ ತೆರಳಿ ಸುಮಾರು 10,000 ಕೆ.ಜಿ. ಗೂ ಅಧಿಕ ತರಕಾರಿ ವಿತರಣೆ ಮಾಡಿರುವದಾಗಿ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ,ಸಮಾಜ ಸೇವಕಿ ಪಡಿಕಲ್ ಕುಸುಮಾವತಿ ಚಂದ್ರಶೇಖರ್ ತಿಳಿಸಿದ್ದಾರೆ.
ಈವರೆಗೆ ಈರುಳ್ಳಿ, ಆಲೂಗೆಡ್ಡೆ, ಟೊಮೆಟೋ, ಕೋಸು ಇತ್ಯಾದಿಗಳ ಕಿಟ್ ತಯಾರಿಸಿ ಆರ್ಥಿಕವಾಗಿ ದುರ್ಬಲರಾದ ಕುಟುಂಬಗಳಿಗೆ ವಿತರಿಸಲಾಗಿದ್ದು, ಮುಂದೆಯೂ ಅರ್ಹರನ್ನು ಗುರುತಿಸಿ ವಿತರಣೆ ಮಾಡುವ ಉದ್ಧೇಶವಿದೆ ಎಂದು ತಿಳಿಸಿದ್ದಾರೆ. ಕರ್ನಾಟಕ ಪ್ರಾಂತ್ಯ ರೈತ ಮತ್ತು ಕಾರ್ಮಿಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಶಶಿಕುಮಾರ್, ಘಟಕದ ಹೆಚ್.ಎನ್.ಮಂಜುಳಾ, ಮಂಜುನಾಥ್ ಮುಂತಾದವರ ಸಹಕಾರದೊಂದಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ನುಡಿದರು.
ತಿತಿಮತಿ ವ್ಯಾಪ್ತಿಯ ದೇವಮಚ್ಚಿ, ರೇಷ್ಮೆ ಹಡ್ಲು, ಮತ್ತಿಗೋಡು, ಪೆÇನ್ನಂಪೇಟೆಯ ಶಿವ ಕಾಲೋನಿ, ಪಾಲಿಬೆಟ್ಟದ ಗಾಂಧಿ ಹಳ್ಳಿ, ನಿಟ್ಟೂರು ಗ್ರಾಮದ ಕುಂಬಾರ ಕಟ್ಟೆ,ಪಾಲದಳ ಹಾಗೂ ತಟ್ಟೆಕೆರೆ ಹಾಡಿಗಳಿಗೆ ವಿತರಿಸಲಾಗಿದ್ದು, ಗೋಣಿಕೊಪ್ಪಲಿನ ಪೌರಕಾರ್ಮಿಕರಿಗೂ ನೀಡಲಾಗಿದೆ. ಇದೇ ಸಂದರ್ಭ ಕೊರೊನಾ ಜಾಗೃತಿ ಯನ್ನು ಮೂಡಿಸಲಾಗಿದ್ದು ಸರ್ಕಾರದ ಆದೇಶವನ್ನು ತಪ್ಪದೇ ಪಾಲಿಸು ವಂತೆಯೂ ಮನವಿ ಮಾಡಿರುವದಾಗಿ ಹೇಳಿದರು. ಬಾಳೆಲೆ-ನಿಟ್ಟೂರು ಗ್ರಾ.ಪಂ.ಪಿಡಿಓ ಮನ್‍ಮೋಹನ್, ಪೆÇನ್ನಂಪೇಟೆ ಪಿಡಿಓ ಪುಟ್ಟರಾಜು, ಗೋಣಿಕೊಪ್ಪಲು ಪಿಡಿಓ ಶ್ರೀನಿವಾಸ್, ಪಾಲಿಬೆಟ್ಟ ಗ್ರಾ.ಪಂ.ಸದಸ್ಯೆ ಇಂದಿರಾ ಅವರೂ ಇದೇ ಸಂದರ್ಭ ಸಹಕರಿಸಿರುವದಾಗಿ ನುಡಿದರು.
ಕೊಡಗು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ನಿರ್ದೇಶನ ಮೇಲೆ, ವೀರಾಜಪೇಟೆ ಪೆÇಲೀಸ್ ಉಪ ಅಧೀಕ್ಷಕರ ಅನುಮತಿ ಹಾಗೂ ಎಲ್ಲ ಗ್ರಾ.ಪಂ.ಸಹಕಾರದೊಂದಿಗೆ ಗಿರಿಜನರು ಹಾಗೂ ಪೌರ ಕಾರ್ಮಿಕರಿಗೆ ತರಕಾರಿ ನೀಡಲಾಯಿತು. ಇದೇ ಸಂದರ್ಭ ಅರ್ಹ ಫಲಾನುಭವಿಗಳು, ವಲಸೆ ಕಾರ್ಮಿಕರಿಗೆ ‘ಸರ್ಕಾರದ ಕಿಟ್’ ವಂಚಿತರಾದವರನ್ನು ಗುರುತಿಸಿ ಗಮನ ಸೆಳೆಯಲಾಗಿದೆ ಎಂದು ಹೇಳಿದರು.