ಮಡಿಕೇರಿ, ಏ. 24 : ರಾಜ್ಯದ ಕಂಟೈನ್‍ಮೆಂಟ್ ವಲಯ ಹೊರತುಪಡಿಸಿ ಉಳಿದ ಕಡೆ ಕಲ್ಲು ಗಣಿಗಾರಿಕೆ ನಿರ್ವಹಿಸಲು ರಾಜ್ಯ ಭೂ ವಿಜ್ಞಾನ ಇಲಾಖೆಯ ನಿರ್ದೇಶಕರು ಅವಕಾಶ ಕಲ್ಪಿಸಿ ಆದೇಶ ಹೊರಡಿಸಿರು ವುದಾಗಿ ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಮಾಹಿತಿಯಿತ್ತಿದ್ದಾರೆ. ಇದರ ಅನ್ವಯ ಕಲ್ಲು ಗಣಿಗಾರಿಕೆ, ಖನಿಜ ಸಾಗಾಣಿಕೆ ಮತ್ತು ಖನಿಜ ಉತ್ಪತ್ತಿಗೆ ಅವಕಾಶವಿದೆ ಎಂದು ಶಾಸಕರು ತಿಳಿಸಿದ್ದಾರೆ.