ಮಿತ್ರ ಅನಿಲ್ ಅವರ ಬರಹವೇ ಹೀಗೆ.., ಬೆಂಗಳೂರು ಕಡೆ ಹೋಗುತ್ತಿದ್ದಾಗ ಒಮ್ಮೊಮ್ಮೆ ಚಲಿಸುತ್ತಿರುವ ರೈಲು ಕಾಣಸಿಗುತ್ತದೆ. ನೋಡಿದಷ್ಟು ಬೋಗಿಗಳು...., ಅದೇನೋ ಕುತೂಹಲ; ಅದೇನೋ ಕಾತರ.ನಿನ್ನೆಗೆ ಲಾಕ್‍ಡೌನ್ ಡೈರಿಯ 17ನೇ ಅಂಕಣ. ಅನಿಲ್ ಬರಹಕ್ಕೇನೂ ಕೊರತೆಯಿಲ್ಲ; ಕೊರತೆ ಇರುವದು ಪತ್ರಿಕೆಯಲ್ಲಿ ಸ್ಥಳಾವಕಾಶಕ್ಕೆ ! ಇದೀಗ ಕೇವಲ 4 ಪುಟಗಳು ಹೊರ ಬರುತ್ತಿರುವ ಪತ್ರಿಕೆಯಲ್ಲಿ ಸ್ಥಳಾವಕಾಶವಿಲ್ಲದೆ ಅದೆಷ್ಟೋ ಸುದ್ದಿಗಳು, ಬರಹಗಳು, ವರದಿಗಳು ಪ್ರಕಟವಾಗದೆ ಬಾಕಿ ಉಳಿದಿವೆ. ಬರಹಗಾರರಂತೂ ತುಸು ದುಗುಡ, ತುಸು ಸಿಟ್ಟು ಹಾಗೂ ಪೂರ್ಣ ಅಭಿಮಾನದಿಂದ ತಮ್ಮ ಬರಹಗಳ ಪ್ರಕಟಣೆ ಬಗ್ಗೆ ಆಗಾಗ್ಗೆ ಜ್ಞಾಪಿಸುತ್ತಿದ್ದಾರೆ.
ಹಾಗಾಗಿ ಮಿತ್ರ ಅನಿಲ್ ಅವರಲ್ಲಿ ಅಂಕಣಕ್ಕೆ ಸ್ವಲ್ಪ ವಿರಾಮ ಕೋರಿದ್ದೇವೆ; ವಿಶ್ವಾಸ ಹಾಗೂ ಕೃತಜ್ಞತಾಪೂರ್ವಕವಾಗಿ. ಹಾ! ಅವರೂ ಒಪ್ಪಿದ್ದಾರೆ!!
- ಜಿ. ಚಿದ್ವಿಲಾಸ್, ಸಂಪಾದಕ