ಮಡಿಕೇರಿ, ಏ. 24: ಸೋಮವಾರಪೇಟೆ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದ ಶೌಚಾಲಯ ಸಿಬ್ಬಂದಿ ಬಿಹಾರ ಮೂಲದ ಅಶೋಕ್‍ಕುಮಾರ್ ರವರಿಗೆ ಪಟ್ಟಣ ಪಂಚಾಯಿತಿ ವತಿಯಿಂದ ಮೂರು ಹೊತ್ತು ಆಹಾರ ಸರಬರಾಜು ಮಾಡಲಾಗುತ್ತಿದೆ.ಮಾಧ್ಯಮ ಸ್ಪಂದನ ತಂಡದ ಎಸ್.ಎ. ಮುರಳೀಧರ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ರಮೇಶ್ ಅವರನ್ನು ಸಂಪರ್ಕಿಸಿ ಸಮಸ್ಯೆ ಮನವರಿಕೆ ಮಾಡಿಕೊಟ್ಟರು. ಈ ಹಿನ್ನೆಲೆ ಲಾಕ್‍ಡೌನ್ ಮುಗಿಯುವವರೆಗೂ ಆಹಾರ ಪೂರೈಕೆ ಮಾಡಲು ಒಪ್ಪಿದ್ದಾರೆ.