ಪೆರಾಜೆ, ಏ. 24: ಸಂಪಾಜೆ ಹೋಬಳಿಯಲ್ಲಿ ಅಕ್ರಮವಾಗಿ ಮದ್ಯ ತಯಾರಿಸುವ ಮನೆಗಳಿಗೆ ದಾಳಿಮಾಡುವ ಸಂದರ್ಭದಲ್ಲಿ ಅಬಕಾರಿ ಸಿಬ್ಬಂದಿ ಯಾವುದೇ ತರಹದ ಮುಖಗವಸುಗಳು (ಗ್ಲವ್ಸ್), ಸ್ಯಾನಿಟರೈಸ್‍ಗಳು ಇರುವುದಿಲ್ಲ ಕೈಗಳನ್ನು ತೊಳೆಯುವುದಿಲ್ಲ, ಕೆಲವು ತಂಡದಲ್ಲಿ ಮಹಿಳಾ ಸಿಬ್ಬಂದಿಗಳು ಇಲ್ಲದೆ ಮನೆಗಳಿಗೆ ದಾಳಿ ಮಾಡಿ ಹಿರಿಯರಿಗೆ ಗೌರವವಿಲ್ಲದ ನಡವಳಿಕೆ, ಒಂದೇ ವಾಹನಗಳಲ್ಲಿ ನಿಯಮಕ್ಕೆ ಮೀರಿದ ಸಿಬ್ಬಂದಿಗಳು, ಒಟ್ಟಾರೆಯಾಗಿ ಸಾಮಾಜಿಕ ಅಂತರ ಕಾಪಾಡದೆ ಕೊರೊನಾ ತಡೆಯುವ ಹಿನ್ನೆಲೆಯಲ್ಲಿ ದೇಶದಲ್ಲಿ ಜಾರಿಗೊಳಿಸಿರುವ ಸರ್ಕಾರದ ಆದೇಶವನ್ನು ಉಲ್ಲಂಘಿಸಿ ದಾಳಿ ಮಾಡುತ್ತಿದ್ದಾರೆ ಎಂದು ಮಡಿಕೇರಿ ತಾಲೂಕು ಪಂಚಾಯತ್ ಸದಸ್ಯ ನಾಗೇಶ್ ಕುಂದಲ್ಪಾಡಿ ಆರೋಪಿಸಿದರು.

ಪೆರಾಜೆ ಪಂಚಾಯತ್ ಸಭಾಂಗಣದಲ್ಲಿ ನಡೆದ ಎರಡನೇ ಹಂತದ ಗ್ರಾಮಮಟ್ಟದ ಕೊರೊನಾ ಟಾಸ್ಕ್ ಫೆÇೀರ್ಸ್ ಸಭೆಯಲ್ಲಿ ಮಾತನಾಡುತ್ತಾ ಅಕ್ರಮ ಮದ್ಯ ತಯಾರಿಸುವ ಮನೆಗಳಿಗೆ ದಾಳಿ ಮಾಡುವುದಕ್ಕೆ ನಮ್ಮ ಆಕ್ಷೇಪವಿಲ್ಲ, ಆದರೆ ಅಬಕಾರಿ ಸಿಬ್ಬಂದಿಗಳು ದಿನನಿತ್ಯ ಬೇರೆ ಬೇರೆ ಊರುಗಳಿಗೆ ಭೇಟಿ ನೀಡುತ್ತಿದ್ದು, ಅವರು ನಿಯಮಗಳನ್ನು ಉಲ್ಲಂಘಿಸಿ ದಾಳಿ ಮಾಡುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಸರ್ಕಾರದ ಇಷ್ಟೆಲ್ಲ ನಿಯಮಗಳಿದ್ದರೂ ಅದನ್ನು ಉಲ್ಲಂಘಿಸಿ ದಾಳಿ ನಡೆಸಬೇಕೆಂದು ಸೂಚನೆ ಕೊಟ್ಟವರ್ಯಾರು? ಜಿಲ್ಲಾಧಿಕಾರಿಗಳು, ಅಬಕಾರಿ ಆಯುಕ್ತರು, ಕಂದಾಯ ಅಧಿಕಾರಿಗಳು ಇದರ ಬಗ್ಗೆ ಉತ್ತರ ಕೊಡಬೇಕೆಂದು ಒತ್ತಾಯಿಸಿದರು. ಒಂದು ವೇಳೆ ಇದೇ ರೀತಿಯಲ್ಲಿ ಮುಂದುವರಿದರೆ ಆಯಾ ಗ್ರಾಮಮಟ್ಟದಲ್ಲಿ ನಾವೇ ಗ್ರಾಮದ ರಕ್ಷಣೆಗೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.

ಸಭೆಯಲ್ಲಿ ಗ್ರಾಮದಲ್ಲಿ ಪಡಿತರ ಸಮಸ್ಯೆಗಳು, ಆಶಾ ಕಾರ್ಯಕರ್ತೆಯರ ಕೆಲಸ ಕಾರ್ಯಗಳು ಅವರ ಸಮಸ್ಯೆಗಳ ಬಗ್ಗೆ ಚರ್ಚಿಸಲಾಯಿತು. ಸಂಪಾಜೆ ಆರೋಗ್ಯ ಕೇಂದ್ರದ ಕಿರಿಯ ಪುರುಷ ಆರೋಗ್ಯ ಸಹಾಯಕ ರಘು ಎಂ.ಆರ್., ಕಿರಿಯ ಆರೋಗ್ಯ ಸಹಾಯಕಿ ಶೈಲಜಾ ಅವರು ಕೊರೊನಾ, ಡೆಂಗ್ಯೂ, ಮಲೇರಿಯಾ ಇತರ ರೋಗಿಗಳ ಬಗ್ಗೆ ಜಾಗೃತಿ ನೀಡಲಾಯಿತು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಯಲಕ್ಷ್ಮಿ ಧರಣೀಧರ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಂಚಾಯಿತಿ ಉಪಾಧ್ಯಕ್ಷ ನಂಜಪ್ಪ ನಿಡ್ಯಮಲೆ, ಸದಸ್ಯರಾದ ಪ್ರಕಾಶ್ ದೊಡ್ಡಡ್ಕ, ಉದಯಚಂದ್ರ ಕುಂಬಳಚೇರಿ, ಚಿನ್ನಪ್ಪ ಅಡ್ಕದ, ಶಿಲಾಚಿದಾನಂದ ನಿಡ್ಯಮಲೆ, ಕಾರ್ಯದರ್ಶಿ ಕುಮಾರ್, ಸಂಪಾಜೆ ಪೆÇೀಲಿಸ್ ಠಾಣಾ ಸಿಬ್ಬಂದಿ ಹರೀಶ್ ನಾಯ್ಕ್, ಪೆರಾಜೆ ಪ್ರಾ.ಕೃ.ಪ. ಸಿಬ್ಬಂದಿ ಗೋಪಾಲ್ ಕೃಷ್ಣ ಮೇಲಡ್ತಲೆ, ಗ್ರಾಮದ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಪಂಚಾಯಿತಿ ಸಿಬ್ಬಂದಿಗಳು ಭಾಗವಹಿಸಿದ್ದರು.