ವೀರಾಜಪೇಟೆ ಏ. 23: ಕೊರೊನಾ ವೈರಸ್ ಲಾಕ್‍ಡೌನ್‍ನ ನಿರ್ಬಂಧದ ಉಲ್ಲಂಘನೆಯನ್ನು ಪತ್ತೆ ಹಚ್ಚಲು ವೀರಾಜಪೇಟೆ ಪಟ್ಟಣದಲ್ಲಿ ಡ್ರೋನ್ ಕ್ಯಾಮೆರಾಕ್ಕೆ ಪ್ರಯೋಗಾರ್ಥವಾಗಿ ಚಾಲನೆ ನೀಡಲಾಯಿತು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಿಂದ ವೀರಾಜಪೇಟೆಗೆ ಬಂದ ಡ್ರೋನ್ ಕ್ಯಾಮೆರಾದ ತಾಂತ್ರಿಕ ತಜ್ಞರು ಇದನ್ನು ಎಷ್ಟು ಎತ್ತರದಲ್ಲಿ ಯಾವ ಸ್ಥಳದಲ್ಲಿ ಬಳಸಬಹುದು ಎಂದು ಇಲ್ಲಿನ ಸಮುಚ್ಚಯ ಪೊಲೀಸ್ ಅಧಿಕಾರಿಗಳಿಗೆ ಅರಿವು ಮೂಡಿಸಿದರು.

ವೀರಾಜಪೇಟೆ ಸಮುಚ್ಚಯ ಪೊಲೀಸ್ ಠಾಣೆಗಳಿಗೆ ಎರಡು ಡ್ರೋನ್ ಕ್ಯಾಮೆರಾ ಬಂದಿದ್ದು ಕ್ಯಾಮೆರಾವನ್ನು ಪ್ರಯೋಗಾರ್ಥವಾಗಿ ಚಾಲನೆ ನೀಡುವ ಸಮಯದಲ್ಲಿ ಡಿವೈಎಸ್‍ಪಿ ಜಯಕುಮಾರ್, ಸರ್ಕಲ್ ಇನ್ಸ್‍ಪೆಕ್ಟರ್ ಕ್ಯಾತೆಗೌಡ, ಸಬ್‍ಇನ್ಸ್‍ಪೆಕ್ಟರ್‍ಗಳಾದ ಮರಿಸ್ವಾಮಿ ಹಾಗೂ ವೀಣಾ ನಾಯಕ್ ಹಾಜರಿದ್ದರು.

ಡ್ರೋನ್ ಕ್ಯಾಮೆರಾ ಚಾಲನೆಯ ತಾಂತ್ರಿಕ ತಜÐರು ವೀರಾಜಪೇಟೆ ಪಟ್ಟಣದ ಒಂದು ಸುತ್ತ ನಿಗದಿತ ಎತ್ತರಕ್ಕೆ ಹಾರಿಸಿದರು. ತಾಂತ್ರಿಕ ತಜ್ಞರ ಪ್ರಕಾರ ಇದು ನೆಲಮಟ್ಟದಿಂದ ಸುಮಾರು ಮೂರು ಕಿ.ಮೀ. ಎತ್ತರಕ್ಕೂ ಅಧಿಕವಾಗಿ ಹಾರಾಡಲಿದೆ.