ವೀರಾಜಪೇಟೆ, ಏ. 23: ಮೇ 1 ರಿಂದ 3 ರವರೆಗೆ ನಡೆಯಬೇಕಾಗಿದ್ದ ಜಿಲ್ಲಾ ಮಟ್ಟದ ಬಂಟ ಸಮುದಾಯದ ಕ್ರೀಡಾಕೂಟವನ್ನು ಮುಂದೂಡಲಾಗಿದೆ ಎಂದು ತಾಲೂಕು ಕ್ರೀಡಾ ಸಮಿತಿಯ ಅಧ್ಯಕ್ಷ ಸುದೀಶ್ ರೈ ತಿಳಿಸಿದ್ದಾರೆ.

ವೀರಾಜಪೇಟೆಯ ಸಂತ ಅನ್ನಮ್ಮ ವಿದ್ಯಾಸಂಸ್ಥೆಯ ಮೈದಾನದಲ್ಲಿ ಈ ಸಾಲಿನ ಕ್ರೀಡಾಕೂಟ ನಡೆಯ ಬೇಕಾಗಿತ್ತು. ಆದರೆ ಕೊರೊನಾ ಭೀತಿಯಿಂದ ಕ್ರೀಡಾಕೂಟವನ್ನು ಮುಂದೂಡಲಾಗಿದೆ. ಕ್ರೀಡಾಕೂಟದ ಮುಂದಿನ ದಿನಾಂಕವನ್ನು ನಂತರದ ದಿನಗಳಲ್ಲಿ ತಿಳಿಸಲಾಗುವುದು ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.