ಮಡಿಕೇರಿ, ಏ. 23: ಮಡಿಕೇರಿ ಕೊಡವ ಸಮಾಜದಿಂದ ಕರ್ತವ್ಯನಿರತ ಸರಕಾರಿ ಉದ್ಯೋಗಿಗಳು, ಪೌರ ಕಾರ್ಮಿಕರು, ಪೊಲೀಸರು ಸೇರಿದಂತೆ ಆರೋಗ್ಯ ಕಾರ್ಯಕರ್ತರಿಗೆ ಶುಚಿ-ರುಚಿ ಊಟ ಕಲ್ಪಿಸುತ್ತಿರುವ ಬಗ್ಗೆ ಜಿಲ್ಲಾಡಳಿತ ಮೆಚ್ಚುಗೆ ವ್ಯಕ್ತಪಡಿಸಿದೆ.
ಕೊಡವ ಸಮಾಜದ ಅಧ್ಯಕ್ಷ ಕೆ.ಎಸ್. ದೇವಯ್ಯ ಹಾಗೂ ಪ್ರಮುಖರು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದರು. ಈ ಸಂದರ್ಭ ಶ್ಲಾಘನೆಯ ನುಡಿಯಾಡಿದ ಜಿಲ್ಲಾಧಿಕಾರಿ, ಸಾರ್ವಜನಿಕ ಸುರಕ್ಷತೆಗಾಗಿ ಭೋಜನ ಕ್ರಮ ಬದಲಾಯಿಸಿ, ಆಯಾ ಇಲಾಖೆಗಳ ಒಟ್ಟು ಉದ್ಯೋಗಿಗಳ ಪ್ರತ್ಯೇಕ ಪಟ್ಟಿ ತರಿಸಿಕೊಂಡು ಸಂಬಂಧಿಸಿದವರು ಆಹಾರವನ್ನು ಕೊಂಡೊಯ್ದು ಅವರವರ ಕಚೇರಿಗಳಲ್ಲಿ ಅಂತರ ಕಾಯ್ದುಕೊಂಡು ಊಟ ಮಾಡುವಂತೆ ಸಲಹೆ ನೀಡಿದರು.
ಈ ಸಂಬಂಧ ಸ್ವತಃ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ.ಪಿ. ಹಾಗೂ ಉಪ ವಿಭಾಗಾಧಿಕಾರಿ ಟಿ. ಜವರೇಗೌಡ ಖುದ್ದು ಭೇಟಿ ನೀಡಿ, ಊಟದ ಗುಣಮಟ್ಟದೊಂದಿಗೆ ಶುಚಿತ್ವಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.