ಮಡಿಕೇರಿ: ಸೋಮವಾರಪೇಟೆಯ ವಿವಿಧ ಬಡಾವಣೆಗಳಲ್ಲಿರುವ ಕಟ್ಟಡ ಮತ್ತು ಇತರ ಅಸಂಘಟಿತ ವಲಯದ ಕಾರ್ಮಿಕರಿಗೆ ಇಂಡಿಯನ್ ರೆಡ್‍ಕ್ರಾಸ್ ಸಂಸ್ಥೆಯ ಮೂಲಕ ಮಾಸ್ಕ್ ಮತ್ತು ಹ್ಯಾಂಡ್ ವಾಶ್ ಸೋಪ್‍ಗಳನ್ನು ವಿತರಿಸಲಾಯಿತು. ಕೋವಿಡ್-19ರ ಕುರಿತು ಮಾಹಿತಿಯನ್ನು ನೀಡಲಾಯಿತು. ಕಾರ್ಮಿಕರ ಕುಂದು ಕೊರತೆಗಳ ಕುರಿತು ವಿಚಾರಿಸಲಾಯಿತು. ಈ ಸಂದರ್ಭ ಎಂ.ಎಂ. ಯತ್ನಟ್ಟಿ, ಬಿ.ಕೆ. ರವೀಂದ್ರ ರೈ ಇತರರು ಇದ್ದರು.

* ಹಟ್ಟಿಹೊಳೆ ಹತ್ತಿರ ಶೆಡ್‍ನಲ್ಲಿರುವ ಕಟ್ಟಡ ಕಾರ್ಮಿಕರಿಗೆ ಇಂಡಿಯನ್ ರೆಡ್‍ಕ್ರಾಸ್ ಸಂಸ್ಥೆಯ ಮೂಲಕ ಮಾಸ್ಕ್ ಮತ್ತು ಹ್ಯಾಂಡ್ ವಾಶ್ ಸೋಪ್‍ಗಳನ್ನು ವಿತರಿಸಲಾಯಿತು.ಶನಿವಾರಸಂತೆ: ಶನಿವಾರಸಂತೆ ಪೊಲೀಸ್ ಠಾಣೆಯ ಪೊಲೀಸರಿಗೆ ಖಾಸಗಿ ವೈದ್ಯ ಡಾ. ಪುಟ್ಟರಾಜ್ ಅವರು ಉಚಿತವಾಗಿ ಮಾಸ್ಕ್ ವಿತರಣೆ ಮಾಡಿದರು. ಪೊಲೀಸ್ ಠಾಣಾಧಿಕಾರಿ ಕೃಷ್ಣನಾಯಕ್, ಸಿಬ್ಬಂದಿಗಳಾದ ಬೋಪಣ್ಣ, ಶಫೀರ್, ವೆಂಕಟೇಶ್, ಪೂರ್ಣಿಮ, ರಾಧ ಇದ್ದರು.ಪೊನ್ನಂಪೇಟೆ: ಕೊಡಗು ಜೆ.ಡಿ.ಎಸ್. ವತಿಯಿಂದ ಶ್ರೀಮಂಗಲ, ಟಿ. ಶೆಟ್ಟಿಗೇರಿಯಲ್ಲಿ ಬಡ ಕಾರ್ಮಿಕರಿಗೆ ಉಚಿತ ತರಕಾರಿ ಮತ್ತು ಮಾಸ್ಕ್ ವಿತರಣೆ ಮಾಡಲಾಯಿತು. ತರಕಾರಿ ಮತ್ತು ಮಾಸ್ಕ್‍ನ್ನು ಜಿಲ್ಲಾ ಜೆಡಿಎಸ್ ವಕ್ತಾರ ಎಂ.ಟಿ. ಕಾರ್ಯಪ್ಪ ಮತ್ತು ಜಿಲ್ಲಾ ಜೆಡಿಎಸ್ ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷ ಪರಮಾಲೆ ಗಣೇಶ್ ಅವರು ವಿತರಿಸಿದರು.

ಶ್ರೀಮಂಗಲ ಗಿರಿಜನ ಕಾಲೋನಿಯ ನಿವಾಸಿಗಳಿಗೆ ಕೊರೊನಾ ತಡೆಗಟ್ಟಲು ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮ ಮತ್ತು ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್ ಬಳಸುವ ಬಗ್ಗೆ ಅರಿವು ಮೂಡಿಸಲಾಯಿತು. ಟಿ. ಶೆಟ್ಟಿಗೇರಿ ಗ್ರಾಮದ ವಿಶೇಷಚೇತನರೊಬ್ಬರ ಮನೆಗೂ ತೆರಳಿ ತರಕಾರಿ ಮತ್ತು ಮಾಸ್ಕ್ ನೀಡಲಾಯಿತು. ಈ ಭಾಗದಲ್ಲಿ ಅನೇಕ ಬಡ ಕುಟುಂಬ ಸಂಕಷ್ಟದಲ್ಲಿದ್ದು, ಸರಕಾರ ಆರ್ಥಿಕ ಸಹಾಯ ನೀಡಲು ಆಗ್ರಹಿಸಲಾಗಿದೆ.ಮಡಿಕೇರಿ: ನಗರದ ನಗರಸಭೆಯ ಹಿಂಭಾಗ, ಹಾಕಿ ಕ್ರೀಡಾಂಗಣದ ಹತ್ತಿರ, ಐಟಿಐ ಜಂಕ್ಷನ್ ಹತ್ತಿರ, ಎಫ್‍ಎಂಸಿ ಕಾಲೇಜ್ ಹತ್ತಿರ ಮತ್ತು ವಿದ್ಯಾನಗರದಲ್ಲಿಯ ಕಟ್ಟಡ ನಿರ್ಮಾಣ ವಲಸೆ ಮತ್ತು ಸ್ಥಳಿಯ ಕಾರ್ಮಿಕರಿಗೆ ಮಾಸ್ಕ್, ಹ್ಯಾಂಡ್ ವಾಶ್ ಸೋಪ್ ಮತ್ತು ಕೆಲವು ಕಡೆ ಸ್ಯಾನಿಟೈಜರ್‍ಗಳನ್ನು ಕೊಟ್ಟು ಅದನ್ನು ಉಪಯೋಗಿಸುವ ವಿಧಾನದ ಕುರಿತು ಮತ್ತು ಕೋವಿಡ್-19ರ ಕುರಿತು ಮಾಹಿತಿ ನೀಡುವ ಮೂಲಕ ತಿಳುವಳಿಕೆ ನೀಡಲಾಯಿತು.

*ಗುಡ್ಡೆಹೊಸೂರು ಹತ್ತಿರ ಮತ್ತು ಬಸವನಳ್ಳಿಯ ಹೊಸಕಾಡಿನಲ್ಲಿರುವ ಕಾರ್ಮಿಕರಿಗೆ ಮಾಸ್ಕ್, ಹ್ಯಾಂಡ್ ವಾಶ್ ಸೋಪ್ ವಿತರಿಸಿ ಕೋವಿಡ್-19ರ ಕುರಿತು ಮಾಹಿತಿ ನೀಡುವ ಮೂಲಕ ತಿಳುವಳಿಕೆ ನೀಡಲಾಯಿತು.ಕೂಡಿಗೆ: ಕೂಡಿಗೆಯ ಬಿಜೆಪಿ ಮಹಿಳಾ ಮೋರ್ಚಾ ಶಕ್ತಿ ಕೇಂದ್ರದ ವತಿಯಿಂದ, ಶಕ್ತಿ ಕೇಂದ್ರದ ಅಧ್ಯಕ್ಷೆ ಸಾವಿತ್ರಿ ಅವರು ಕೂಡಿಗೆ ಮತ್ತು ಕೂಡುಮಂಗಳೂರು ಸಮುದಾಯ ಭವನದ ಹತ್ತಿರ ಗ್ರಾಮಸ್ಥರಿಗೆ ಹಾಗೂ ಕೂಡಿಗೆ ಕೆನರಾ ಬ್ಯಾಂಕ್‍ನ ವ್ಯವಹಾರಕ್ಕೆ ಬಂದ ಗ್ರಾಹಕರಿಗೆ ಉಚಿತವಾಗಿ ಮಾಸ್ಕ್ ವಿತರಣೆ ಮಾಡಿದರು. ಈ ಸಂದರ್ಭ ಜಿಲ್ಲಾ ಬಿಜೆಪಿ ಪದಾಧಿಕಾರಿಗಳಾದÀ ಕನಕ ಗೌರಮ್ಮ ಸೇರಿದಂತೆ ವಿವಿಧ ಘಟಕಗಳ ಸಮಿತಿಯ ಸದಸ್ಯರು ಇದ್ದರು.ಮಡಿಕೇರಿ: ನಗರದಲ್ಲಿ ಅಸಂಘಟಿತ ವಲಯಗಳಾದ ಸವಿತಾ ಸಮಾಜ, ಗೂಡ್ಸ್ ಟೆಂಪೆÇ ಮಾಲೀಕರು ಮತ್ತು ಚಾಲಕರು, ಮಡಿಕೇರಿ ಟೂರಿಸ್ಟ್ ವೆಹಿಕಲ್ ಎಂಪ್ಲಾಯರ್ಸ್ ಮತ್ತು ಡ್ರೈವರ್ಸ್, ಖಾಸಗಿ ಬಸ್ ಚಾಲಕರು ಮತ್ತು ನಿರ್ವಾಹಕರು, ಕೊಡಗು ಜಿಲ್ಲಾ ಕುಲಾಲ ಕುಂಬಾರರುಗಳಿಗೆ ಮಾಸ್ಕ್, ಹ್ಯಾಂಡ್‍ವಾಶ್, ಸೋಪ್ ಮತ್ತು ಸ್ಯಾನಿಟೈಸರ್‍ಗಳನ್ನು ಇಂಡಿಯನ್ ರೆಡ್ ಕ್ರಾಸ್ ಸಂಸ್ಥೆಯ ಮೂಲಕ ವಿತರಿಸಲಾಯಿತು. ಈ ಸಂದರ್ಭ ಕಾರ್ಮಿಕರ ಕೊಂದು ಕೊರತೆ ವಿಚಾರಿಸಲಾಯಿತು. ತಾಳತ್ ಮನೆಯಲ್ಲಿಯ ಮಾಲೀಕರು ವಸತಿಗೆ ವ್ಯವಸ್ಥೆ ಮಾಡಿರುವ ಸ್ಥಳಗಳಲ್ಲಿರುವ ವಲಸೆ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಕೋವಿಡ್-19ರ ಕುರಿತು ಮಾಹಿತಿಯನ್ನು ನೀಡಿ ಕುಂದುಕೊರತೆಗಳ ಬಗ್ಗೆ ವಿಚಾರಿಸಲಾಯಿತು ಎಂದು ಹಿರಿಯ ಕಾರ್ಮಿಕ ನಿರೀಕ್ಷಕ ಎಂ.ಎಂ ಯತ್ನಟ್ಟಿ ತಿಳಿಸಿದ್ದಾರೆ. ಇಂಡಿಯನ್ ರೆಡ್ ಕ್ರಾಸ್ ಸಂಸ್ಥೆ ಸಭಾಪತಿ ಬಿ.ಕೆ. ರವೀಂದ್ರ ರೈ, ಕಾರ್ಯದರ್ಶಿ ಹೆಚ್.ಆರ್. ಮುರಳೀಧರ್ ಇತರರು ಇದ್ದರು.