ಮಡಿಕೇರಿ, ಏ. 22: ಮರ್ಕರಾ ಕೌಂಟಿ ಕ್ಲಬ್ ವತಿಯಿಂದ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮತ್ತು ಭೋಧಕ ಆಸ್ಪತ್ರೆಗೆ ರೋಗಿಗಳ ಉಪಯೋಗಕ್ಕಾಗಿ 1 ಲಕ್ಷ ರೂ. ಮೌಲ್ಯದ ಉಪಕರಣಗಳನ್ನು ಕೊಡುಗೆಯಾಗಿ ನೀಡಲಾಗುತ್ತಿದೆ.

ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಮತ್ತು ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಅವರು ತಾ. 23 ರಂದು (ಇಂದು) ಬೆಳಿಗ್ಗೆ 10.15 ಗಂಟೆಗೆ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮತ್ತು ಭೋಧಕ ಆಸ್ಪತ್ರೆಯ ಡೀನ್ ಮತ್ತು ನಿರ್ದೇಶಕರಿಗೆ ಉಪಕರಣಗಳನ್ನು ಹಸ್ತಾಂತರಿಸಲಿ ದ್ದಾರೆ ಎಂದು ಮರ್ಕರ ಕೌಂಟಿ ಕ್ಲಬ್‍ನ ಅಧ್ಯಕ್ಷ ಮೋಹನ್ ಮೊಣ್ಣಪ್ಪ ತಿಳಿಸಿದ್ದಾರೆ.