ಸೋಮವಾರಪೇಟೆ, ಏ. 22: ಲಾಕ್‍ಡೌನ್ ನಿಯಮ ಉಲ್ಲಂಘನೆ ಮಾಡಿದ ಪಟ್ಟಣದ ಕೆಲ ಅಂಗಡಿಗಳ ಮಾಲೀಕರಿಗೆ ಪೊಲೀಸರು ದಂಡ ವಿಧಿಸಿ, ಎಚ್ಚರಿಕೆ ನೀಡಿದ್ದಾರೆ.

ಲಾಕ್‍ಡೌನ್ ಹಿನ್ನೆಲೆ ಅಗತ್ಯ ವಸ್ತುಗಳ ಮಾರಾಟಕ್ಕೆ ಮಾತ್ರ ಅವಕಾಶ ವಿದ್ದು, ಉಳಿದೆಲ್ಲಾ ಅಂಗಡಿಗಳು ಕಳೆದ 1 ತಿಂಗಳಿನಿಂದ ಮುಚ್ಚಲ್ಪಟ್ಟಿವೆ. ವಾರದ ಮೂರು ದಿನಗಳಲ್ಲಿ ಮಾತ್ರ ಅವಶ್ಯ ವಸ್ತುಗಳ ಮಾರಾಟಕ್ಕೆ ಲಾಕ್‍ಡೌನ್ ಸಡಿಲಿಕೆಯಿದ್ದು, ಬುಧವಾರದಂದು ಲಾಕ್‍ಡೌನ್ ನಿಯಮ ಮೀರಿ ಪಟ್ಟಣದಲ್ಲಿ ಕೆಲವೊಂದು ಅಂಗಡಿಗಳು ತೆರೆದಿದ್ದರಿಂದ, ಪೊಲೀಸರು ದಂಡ ವಿಧಿಸಿದ್ದಾರೆ. ಪಟ್ಟಣ ವ್ಯಾಪ್ತಿಯಲ್ಲಿ ತೆರೆಯಲ್ಪಟ್ಟಿದ್ದ 16 ಅಂಗಡಿಗಳ ಮಾಲೀಕರನ್ನು ಠಾಣಾಧಿಕಾರಿ ಶಿವಶಂಕರ್ ಅವರು ಠಾಣೆಗೆ ಕರೆಸಿ ಎಚ್ಚರಿಕೆ ನೀಡಿ ದಂಡ ವಿಧಿಸಿದ್ದಾರೆ.