ಗೋಣಿಕೊಪ್ಪಲು, ಏ. 22: ಕಳೆದ ಒಂದು ತಿಂಗಳ ಹಿಂದೆ ಕಾಡಾನೆ ದಾಳಿಗೆ ಸಿಲುಕಿ ಗಂಭೀರ ಸ್ವರೂಪದ ಗಾಯಗೊಂಡು ಚಿಕಿತ್ಸೆಗೆ ಒಳಗಾಗಿದ್ದ ಪೆÇನ್ನಂಪೇಟೆ ಹೋಬಳಿಯ ಮಾಯಮುಡಿ ಗ್ರಾಮದ ಕಾವಾಲ ಎಂಬಾತನನ್ನು ಭೇಟಿ ಮಾಡಿದ ರೈತ ಮುಖಂಡರು ಚಿಕಿತ್ಸಾ ವೆಚ್ಚಕ್ಕಾಗಿ ಅರಣ್ಯ ಇಲಾಖೆಯ ವತಿಯಿಂದ ಒಂದು ಲಕ್ಷ ಕೊಡಿಸಿದರು.

ಮಡಿಕೇರಿಯ ಅಶ್ವಿನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಾವಲನ ಬಳಿ ತೆರಳಿದ ಅರಣ್ಯ ಇಲಾಖೆಯ ಅಧಿಕಾರಿಗಳು ರೈತ ಸಂಘದ ಅಧ್ಯಕ್ಷ ಕಾಡ್ಯಮಾಡ ಮನುಸೋಮಯ್ಯ ಹಾಗೂ ಮುಖಂಡರ ಸಮ್ಮುಖದಲ್ಲಿ ಮೊದಲ ಕಂತಿನ ಚಿಕಿತ್ಸಾ ವೆಚ್ಚಕ್ಕಾಗಿ ಒಂದು ಲಕ್ಷ ಚೆಕ್ ವಿತರಿಸಿದರು.

ಈ ಸಂದರ್ಭ ಪೆÇನ್ನಂಪೇಟೆ ಹೋಬಳಿ ಅಧ್ಯಕ್ಷ ಆಲೆಮಾಡ ಮಂಜುನಾಥ್, ಮಾಯಮುಡಿ ಗ್ರಾಮ ಪಂಚಾಯಿತಿ ಸಂಚಾಲಕರಾದ ಪುಚ್ಚಿಮಾಡ ರಾಯ್ ಮಾದಪ್ಪ, ಹುದಿಕೇರಿ ಹೋಬಳಿ ಅಧ್ಯಕ್ಷರಾದ ಚಂಗುಲಂಡ ಸೂರಜ್, ಕಿರಗೂರು ಗ್ರಾಮದ ರೈತ ಮುಖಂಡರಾದ ಚಪ್ಪುಡಿರ ರೋಷÀನ್, ಹೊನ್ನಿಕೊಪ್ಪದ ತಮ್ಮಯ್ಯ, ಅರಣ್ಯ ಇಲಾಖೆಯ ವಲಯ ಅಧಿಕಾರಿ ಉಮಾಶಂಕರ್ ಉಪಸ್ಥಿತರಿದ್ದರು.