ಕೂಡಿಗೆ, ಏ. 22: ಕೂಡಿಗೆಯ ಕೂಡುಮಂಗಳೂರು ರಾಮೇಶ್ವರ ಸಹಕಾರ ಸಂಘದ ವತಿಯಿಂದ ರೈತರಿಗೆ ರಿಯಾಯಿತಿ ದರದಲ್ಲಿ ಸಾಮಗ್ರಿಗಳ ವಿತರಣೆ ನಡೆಯಿತು.

ಹಾಸನ ಹಾಲು ಒಕ್ಕೂಟದ ಅಧ್ಯಕ್ಷ ಹೆಚ್.ಡಿ. ರೇವಣ್ಣ ಹಾಸನದಲ್ಲಿ ರೈತರು ಬೆಳೆದ ಈರುಳ್ಳಿ ಮತ್ತು ಬೆಳ್ಳುಳ್ಳಿ ಖರೀದಿಸಿ ಅವುಗಳನ್ನು ಜಿಲ್ಲೆಯ ಹಾಲು ಉತ್ಪಾದಕರ ಸಂಘಗಳ ಮೂಲಕ ರೈತರಿಗೆ ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತಿದೆ.

ಈರುಳ್ಳಿ 100 ರೂಗೆ 6 ಕೆ.ಜಿ. ಮತ್ತು ಬೆಳ್ಳುಳ್ಳಿಗೆ 90 ರೂಗೆ ಕೆ.ಜಿ. ದರ ನಿಗದಿ ಮಾಡಿ 20 ಕ್ವಿಂಟಾಲ್ ಈರುಳ್ಳಿ ಮತ್ತು 10 ಕ್ವಿಂಟಾಲ್ ಬೆಳ್ಳುಳ್ಳಿ ಮತ್ತು ಬೇಳೆ ಕಾಳು ಸಂಬಾರ, ಎಣ್ಣೆ ಸಂಘದ ಆವರಣದಲ್ಲಿ ಮಾರಾಟ ಮಾಡಲಾಯಿತು.

ಈ ಸಂದರ್ಭದಲ್ಲಿ ಹಾಸನ ಹಾಲು ಒಕ್ಕೂಟದ ಕೊಡಗು ಜಿಲ್ಲಾ ನಿರ್ದೇಶಕ. ಕೆ.ಕೆ. ಹೇಮಂತ್ ಕುಮಾರ್ ಸಹಕಾರ ಸಂಘದ ಉಪಾಧ್ಯಕ್ಷ ಟಿ.ಪಿ. ಹಮೀದ್, ಸಹಕಾರ ಬ್ಯಾಂಕ್‍ನ ವ್ಯವಸ್ಥಾಪಕಿ ಮೀನಾ ಹಾಗೂ ಸಿಬ್ಬಂದಿಗಳು ಇದ್ದರು.