ಸಿದ್ದಾಪುರ, ಏ. 22: ಅಕ್ರಮವಾಗಿ ಮಾರಾಟಕ್ಕೆ ಗೋಮಾಂಸ ಸಾಗಿಸುತ್ತಿದ್ದ ವ್ಯಕ್ತಿಯೋರ್ವನನ್ನು ಬಂಧಿಸುವಲ್ಲಿ ಸಿದ್ದಾಪುರ ಪೆÇಲೀಸರು ಯಶಸ್ವಿ ಯಾಗಿದ್ದಾರೆ. ನೆಲ್ಲಿಹುದಿಕೇರಿಯ ನಲ್ವತ್ತೇಕರೆ ನಿವಾಸಿ ಮುಸ್ತಫಾ (42) ಎಂಬಾತ ನೆಲ್ಲಿಹುದಿಕೇರಿ ಗ್ರಾಮ ಪಂಚಾಯಿತಿಯಿಂದ ತರಕಾರಿ ತರಲೆಂದು ಅನುಮತಿ ಪತ್ರ ಪಡೆದುಕೊಂಡಿದ್ದ ಎನ್ನಲಾಗಿದೆ. ಈತ ವಾರದ ಮೂರು ದಿನ ತರಕಾರಿಗೆಂದು ತನ್ನ (ಏ ಂ 12 ಃ 3948) ಜೀತೋ ವಾಹನದಲ್ಲಿ ತೆರಳುತ್ತಿದ್ದ. ಮಂಗಳವಾರ ರಾತ್ರಿ ಹುಣಸೂರಿಗೆ ತೆರಳಿ, ಬುಧವಾರ ಬೆಳಗ್ಗಿನ ಜಾವ ನಾಲ್ಕು ಗಂಟೆಗೆ ಹುಣಸೂರಿನಿಂದ ಮಾಲ್ದಾರೆ ಮಾರ್ಗವಾಗಿ, ಸಿದ್ದಾಪುರಕ್ಕೆ ಬರುತ್ತಿದ್ದ ಸಂದರ್ಭ ಮಾಲ್ದಾರೆ ತಪಾಸಣಾ ಕೇಂದ್ರದಲ್ಲಿ ಕರ್ತವ್ಯದಲ್ಲಿದ್ದ ಮುಖ್ಯ ಪೇದೆ ವಿಠ್ಠಲ (ಮೊದಲ ಪುಟದಿಂದ) ಪೂಜಾರಿ ಹಾಗೂ ಸಿಬ್ಬಂದಿ ಮಲ್ಲಪ್ಪ ಮಗಶೀರ್ ಅವರು ವಾಹನವನ್ನು ಪರಿಶೀಲಿಸಿದಾಗ ಟೊಮೆಟೋ ತುಂಬಿದ ಪೆಟ್ಟಿಗೆಯಲ್ಲಿ ಗೋಮಾಂಸ ಇದ್ದುದನ್ನು ಪತ್ತೆಹಚ್ಚಿದ್ದಾರೆ. ಈ ಬಗ್ಗೆ ಠಾಣಾಧಿಕಾರಿ ಬೋಜಪ್ಪ ಅವರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಭೇಟಿ ನೀಡಿದ ಠಾಣಾಧಿಕಾರಿ ಹೆಚ್.ಎಸ್. ಬೋಜಪ್ಪ ಮತ್ತಷ್ಟು ತರಕಾರಿ ಪೆಟ್ಟಿಗೆಯನ್ನು ಪರಿಶೀಲಿಸಿದಾಗ ವ್ಯವಸ್ಥಿತ ರೀತಿಯಲ್ಲಿ ಯಾರಿಗೂ ತಿಳಿಯದಂತೆ ತರಕಾರಿ ಕೆಳಭಾಗದಲ್ಲಿ 200 ಕೆ.ಜಿ.ಗೂ ಅಧಿಕ ಮಾಂಸವನ್ನು ಶೇಖರಿಸಿಟ್ಟಿರುವುದು ಕಂಡುಬಂದಿದೆ.ಈ ಹಿನ್ನೆಲೆಯಲ್ಲಿ ಆರೋಪಿ ಮುಸ್ತಫಾನನ್ನು ಬಂಧಿಸಿ ವಾಹನವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಸ್ಥಳಕ್ಕೆ ಪಶುವೈದ್ಯಾಧಿಕಾರಿ ಭೇಟಿ ನೀಡಿ ಮಾಂಸವನ್ನು ಪರಿಶೀಲಿಸಿ ಗೋಮಾಂಸವೆಂದು ದೃಢಪಡಿಸಿದ್ದಾರೆ. ಆರೋಪಿ ಮುಸ್ತಫಾ ಲಾಕ್‍ಡೌನ್ ಉಲ್ಲಂಘಿಸಿ ಅಕ್ರಮವಾಗಿ ಮಾಂಸವನ್ನು ಸಾಗಾಟ ಮಾಡುತ್ತಿರುವುದು ಬೆಳಕಿಗೆ ಬಂದಿದ್ದು, ಇನ್ನಷ್ಟು ವಾಹನವನ್ನು ತಪಾಸಣೆ ಕೇಂದ್ರದಲ್ಲಿ ಪರಿಶೀಲಿಸಿ ಕ್ರಮಕೈಗೊಳ್ಳಬೇಕೆಂದು ಗ್ರಾಮಸ್ಥರು ಪೆÇಲೀಸ್ ಇಲಾಖೆಗೆ ಮನವಿ ಮಾಡಿದ್ದಾರೆ.

ಪೆÇಲೀಸ್ ವರಿಷ್ಠಾಧಿಕಾರಿ ಡಿ ಸುಮನ್ ಪನ್ನೇಕರ್ ಹಾಗೂ ಡಿವೈಎಸ್‍ಪಿ ಬಾರಿಕೆ ದಿನೇಶ್ ಕುಮಾರ್ ಮಾರ್ಗದರ್ಶನದಲ್ಲಿ, ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ ನೇತೃತ್ವದಲ್ಲಿ ಠಾಣಾಧಿಕಾರಿ ಬೋಜಪ್ಪ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.