ಮಡಿಕೇರಿ, ಏ. 22: ಪೆÇಲೀಸ್ ಇಲಾಖೆ ಸಹಭಾಗಿತ್ವದಲ್ಲಿ ಕೊಡಗು ಜಿಲ್ಲಾಡಳಿತ ವತಿಯಿಂದ ತೆರೆದಿರುವ ‘ಹಸಿದ ಹೊಟ್ಟೆಗೆ - ತಣಿವು ಪೆಟ್ಟಿಗೆ’ಗೆ ಟಾಟಾ ಕಾಫಿ ಲಿಮಿಟೆಡ್ ವತಿಯಿಂದ ರೂ. 1.50 ಲಕ್ಷ ಮೌಲ್ಯದ 2 ಸಾವಿರ ಕೆ.ಜಿ. ಅಕ್ಕಿ, 1 ಸಾವಿರ ಕೆ.ಜಿ. ತೊಗರಿ ಬೇಳೆಯನ್ನು ನೀಡಲಾಯಿತು. ಪಡಿತರವನ್ನು ಪೆÇಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ. ಪನ್ನೇಕರ್ ಸ್ವೀಕರಿಸಿದರು. ಈ ಸಂದರ್ಭ ಮಡಿಕೇರಿ ತಹಶೀಲ್ದಾರ್ ಮಹೇಶ್, ಇಓ ಲಕ್ಷ್ಮಿ, ಡಿವೈಎಸ್ಪಿ ದಿನೇಶ್, ಸಿಪಿಐ ಅನೂಪ್ ಮಾದಪ್ಪ, ಟಾಟಾ ಕಾಫಿ ಲಿಮಿಟೆಡ್‍ನ ಸೀನಿಯರ್ ಜನರಲ್ ಮ್ಯಾನೇಜರ್ ಎಂ.ಬಿ. ಗಣಪತಿ, ಲೀಗಲ್ ಮ್ಯಾನೇಜರ್ ವಿಜಯ್ ಕಾರ್ನಾಡ್ ಮತ್ತಿತರರು ಇದ್ದರು.ಕುಶಾಲನಗರ : ಕುಶಾಲನಗರದ ಬಿಎಸ್‍ಆರ್ ಗ್ರೂಪ್ಸ್ ವತಿಯಿಂದ ಹಸಿದ ಹೊಟ್ಟೆಗೆ ತಣಿವು ಪೆಟ್ಟಿಗೆ ಅಗತ್ಯ ವಸ್ತುಗಳನ್ನು ನೀಡಲಾಯಿತು. ಬಿಎಸ್‍ಆರ್ ಗ್ರೂಪ್ಸ್‍ನ ವಿ.ಎಂ.ವಿಜಯ್, ಶಶಿಕಿರಣ ಅವರುಗಳು ತಾಲೂಕು ತಹಶೀಲ್ದಾರ್ ಗೋವಿಂದರಾಜು, ಡಿವೈಎಸ್ಪಿ ಶೈಲೇಂದ್ರ ಅವರುಗಳ ಉಪಸ್ಥಿತಿಯಲ್ಲಿ ಹಸ್ತಾಂತರಿಸಿದರು.