ಕುಶಾಲನಗರ, ಏ. 22: ಕುಶಾಲನಗರದ ಯುವ ಪ್ರತಿಭೆ ಸಿಂಚನಾ ಪೆÇನ್ನವ್ವ ಅಭಿನಯದ ಕೊರೊನಾ ಬಗ್ಗೆ ಜಾಗೃತಿ ಮೂಡಿಸುವ ಕಿರುಚಿತ್ರವೊಂದು ಎಲ್ಲರ ಗಮನ ಸೆಳೆಯುತ್ತಿದೆ.

ಲಾಕ್‍ಡೌನ್ ಕಾರಣದದಿಂದ ದೇಶದ ಎಲ್ಲಾ ರೀತಿಯ ವ್ಯವಹಾರಗಳು ನಿಲುಗಡೆಯಾಗಿದ್ದು, ಈ ಸಂದರ್ಭ ಚಲನಚಿತ್ರ ನಿರ್ದೇಶಕ ಪ್ರೀತಂ ಆರ್. ಶೆಟ್ಟಿ ಅವರ ನಿರ್ದೇಶನದಲ್ಲಿ 7 ನಿಮಿಷಗಳ ಕಿರು ಚಿತ್ರವೊಂದನ್ನು ನಿರ್ಮಿಸಿದ್ದು ಇದು ದೇಶ-ವಿದೇಶಗಳಲ್ಲಿ ವೈರಲ್ ಆಗುವುದರೊಂದಿಗೆ ದಿನಗೂಲಿ ಕಾರ್ಮಿಕರ ಕಷ್ಟದ ಬಗ್ಗೆ ಬೆಳಕು ಚೆಲ್ಲಿದೆ.

ಊರು ಬಿಟ್ಟು ಮತ್ತೊಂದು ಊರಲ್ಲಿ ಕೆಲಸ ಮಾಡುವ ಕಾರ್ಮಿಕ ಮಹಿಳೆ ಕೆಲಸ ಇಲ್ಲದೆ ಹೋದಾಗ ತನ್ನ ಪುಟ್ಟ ಮಗುವಿನೊಂದಿಗೆ ಪಡಬೇಕಾದ ಕಷ್ಟ, ಅಸಹಾಯಕತೆ, ಜೀವನದ ಭೀಕರತೆ, ಸಹಾಯಹಸ್ತ ನೀಡುವ ಜನರ ಮನೋಭಾವನೆ ಎಲ್ಲವನ್ನೂ ಕಣ್ಣಿಗೆ ಕಟ್ಟುವ ರೀತಿಯಲ್ಲಿ ಚಿತ್ರ ಮೂಡಿಬಂದಿದೆ.

ಪ್ರೀತಂ ಶೆಟ್ಟಿ ನಿರ್ದೇಶನದಲ್ಲಿ ನಿರ್ಮಾಣಗೊಂಡಿದ್ದ ಪಿಂಗಾರ ಚಿತ್ರ ಇತ್ತೀಚೆಗಷ್ಟೆ ಅಂತರರಾಷ್ಟ್ರೀಯ ವಿಶೇಷ ಪ್ರಶಸ್ತಿಗೆ ಭಾಜನವಾಗಿತ್ತು.

ಸಿಂಚನಾ ಕುಶಾಲನಗರದ ಪತ್ರಕರ್ತರಾದ ಎಂ.ಎನ್. ಚಂದ್ರಮೋಹನ್-ವನಿತಾ ದಂಪತಿಯ ಪುತ್ರಿ. ಲಾಕ್‍ಡೌನ್ ಹಿನ್ನೆಲೆ ಊರಿಗೆ ಬರಲಾಗದೆ ಬೆಂಗಳೂರಿನಲ್ಲೇ ನೆಲೆಸಿದ್ದು ಸಂಕಷ್ಟದ ನಡುವೆಯೂ ಕರುಳು ಕರುಗಿಸುವಂತಹ ಕಿರುಚಿತ್ರದಲ್ಲಿ ನಟಿಸಿ ಕೊರೊನಾ ಬಗ್ಗೆ ಜಾಗೃತಿ ಮೂಡಿಸಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.