ಪೆÇನ್ನಂಪೇಟೆ, ಏ. 20: ಕೋವಿಡ್-19ರ ಭೀತಿಯಿಂದಾಗಿ ಜಾರಿಯಲ್ಲಿರುವ ಲಾಕ್ಡೌನ್ ಸಂದರ್ಭದಲ್ಲಿ ಮಸೀದಿಗಳ ಧ್ವನಿವರ್ಧಕಗಳಲ್ಲಿ ಮೊಳಗುವ ಆಝಾನ್ (ಬಾಂಗ್) ಶಬ್ದ ಕಡಿಮೆ ಮಾಡುವಂತೆ ಸರ್ಕಾರದ ಇಲಾಖೆಯೊಂದು ನಿರ್ದೇಶಿಸಿರುವ ಕ್ರಮಕ್ಕೆ ಅತೃಪ್ತಿ ವ್ಯಕ್ತಪಡಿಸಿರುವ ಕೊಡಗು ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಉಪಾಧ್ಯಕ್ಷ ಕೆ.ಎಂ.ಅಬ್ದುಲ್ ರಹಿಮಾನ್ (ಬಾಪು) ಅವರು, ಈ ಸೂಚನೆಯಿಂದ ಸಮುದಾಯದ ಜನತೆಯಲ್ಲಿ ತೀವ್ರ ಗೊಂದಲ ಉಂಟಾಗಿದೆ. ಇಲಾಖೆಯ ಈ ಸೂಚನೆ ತೀರಾ ಅವೈಜ್ಞಾನಿಕವಾದದ್ದು. ಕೋವಿಡ್-19 ಸೋಂಕಿಗು, ಎಂದಿನಂತೆ ಆಝಾನ್ ಮೊಳಗುವುದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ರಾಜ್ಯ ಅಲ್ಪಸಂಖ್ಯಾತರ ಕಲ್ಯಾಣ, ವಕ್ಫ್ ಮತ್ತು ಹಜ್ ಇಲಾಖೆಯ ಸರ್ಕಾರದ ಕಾರ್ಯದರ್ಶಿಯವರು ಇದೇ ಏ. 16ರಂದು ಆದೇಶವೊಂದನ್ನು ಹೊರಡಿಸಿದ್ದು, ಮುಂಬರುವ ಪವಿತ್ರ ರಂಜಾನ್ ತಿಂಗಳಿನಲ್ಲಿ ಲಾಕ್ಡೌನ್ ವಿಸ್ತರಣೆಯಾಗಿರುವ ಮುಂದಿನ ಮೇ 3ರವರೆಗೆ ಪಾಲಿಸಬೇಕಾದ 6 ಮಾರ್ಗಸೂಚಿಯನ್ನು ನಿರ್ದೇಶಿಸಿದ್ದಾರೆ.

ಈ ಎಲ್ಲಾ 5 ಮಾರ್ಗಸೂಚಿಗಳನ್ನು ಒಪ್ಪಬಹುದಾದರೂ, ಈ ಪೈಕಿ ಮಸೀದಿಗಳಲ್ಲಿ ಕಡಿಮೆ ಶಬ್ದದಲ್ಲಿ ಆಝಾನ್ ಮೊಳಗಿಸಬೇಕೆಂದು ನಿರ್ದೇಶಿಸಿರುವುದು ಸೂಕ್ತವಾದುದಲ್ಲ. ಯಾವ ಕಾರಣಕ್ಕಾಗಿ ಈ ಮಾರ್ಗಸೂಚಿಯನ್ನು ನಿರ್ದೇಶಿಸಲಾಗಿದೆ ಎಂಬ ಬಗ್ಗೆ ಜನತೆಯಲ್ಲಿ ತೀವ್ರ ಗೊಂದಲ ಮೂಡಿದೆ ಎಂದು ಅವರು ತಿಳಿಸಿದ್ದಾರೆ.