ಗೋಣಿಕೊಪ್ಪ ವರದಿ, ಏ. 21: ಮಾಯಮುಡಿ ಗ್ರಾಮದಲ್ಲಿ ವಾಸವಿದ್ದ ಪಣಿ ಯರವರ ಕರ್ಕು (35) ತಾ. 13 ರಿಂದ ಕಾಣೆಯಾಗಿದ್ದಾರೆ. ಗೋಣಿಕೊಪ್ಪ ದಿಂದ ಮನೆಗೆ ದಿನಸಿ ವಸ್ತುಗಳನ್ನು ತರಲು ಹೋದವರು ಹಿಂತಿರುಗಿಲ್ಲ. ಕನ್ನಡ, ಕೊಡವ, ಯರವ ಮಾತನಾಡುವ ಇವರು ಸುಮಾರು 4 ಅಡಿ ಎತ್ತರವಿದ್ದಾರೆ. ಈ ಬಗ್ಗೆ ಕರ್ಕು ಅವರ ಪತ್ನಿ ಪಾಲಿ ಗೋಣಿಕೊಪ್ಪ ಪೆÇಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪತ್ತೆಯಾ ದಲ್ಲಿ 08274-247333 ಸಂಖ್ಯೆಗೆ ಮಾಹಿತಿ ನೀಡುವಂತೆ ಗೋಣಿಕೊಪ್ಪ ಪೆÇಲೀಸ್ ಠಾಣೆ ಪ್ರಕಟಣೆ ತಿಳಿಸಿದೆ.